ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ತಾಳಿಕಟ್ಟಿ 3 ದಿನ ಸಂಸಾರ ನಡೆಸಿದ ಕಾಮುಕ ಅರೆಸ್ಟ್…! ➤ ಬಾಲಕಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 31. ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಯುವಕನೋರ್ವ ಆಕೆಗೆ ತಾಳಿ ಕಟ್ಟಿ ಆಕೆಯ ಜೊತೆ 3 ದಿನ ಸಂಸಾರ ನಡೆಸಿದ ಆರೋಪಿಯನ್ನು ಬಂಧಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬೆಳಚವಾಡಿ ಗ್ರಾಮದ ಮಹೇಂದ್ರ (21) ಎಂದು ಗುರುತಿಸಲಾಗಿದೆ. ಈತ ನಾಲ್ಕು ದಿನಗಳ ಹಿಂದೆ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ತಮಿಳುನಾಡಿಗೆ ಕರೆದೊಯ್ದು, ಬಳಿಕ ಅಲ್ಲಿಯೇ ಮನೆ ಮಾಡಿ, ತಾಳಿ ಕಟ್ಟಿದ್ದಲ್ಲದೇ ಆಕೆಯ ಜೊತೆ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಇತ್ತ ಬಾಲಕಿಯ ತಂದೆಯು ಮಗಳು ನಾಪತ್ತೆಯಾಗಿರುವ ಕುರಿತು ಬೇಗೂರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾದ ಬೇಗೂರು ಪಿಎಸ್‌ಐ ರಾಜೇಂದ್ರ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ, ಬಾಲಕಿಯನ್ನು ರಕ್ಷಣೆ ಮಾಡಿ ಬಾಲಮಂದಿರಕ್ಕೆ ಸೇರಿಸಲಾಗಿದೆ.

Also Read  ಉಗ್ರರಿಗೆ ಹಣಕಾಸಿನ ನೆರವು ಆರೋಪ ➤ ದ.ಕ. ಜಿಲ್ಲೆಯ ವಿವಿಧೆಡೆ ಎನ್ಐಎ ದಾಳಿ

 

error: Content is protected !!
Scroll to Top