ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ನೂತನ ಸಮಿತಿ ರಚನೆ ➤ ಅಧ್ಯಕ್ಷರಾಗಿ ಅಬ್ದುಲ್ಲ ಫೈಝಿ, ಪ್ರ.ಕಾರ್ಯದರ್ಶಿಯಾಗಿ ಆಶಿಕ್ ಸುಳ್ಯ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 31. ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ಇದರ ಮಹಾಸಭೆಯ ಸುಳ್ಯದ ಸುಪ್ರೀಂ ಹಾಲ್ ನಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಜಮಾಲ್ ಕೆ.ಎಸ್ ಬೆಳ್ಳಾರೆ ವಹಿಸಿದ್ದರು. ಇರ್ಷಾದ್ ಫೈಝಿ ಪಾಲ್ತಾಡ್ ದುವಾ ನೆರವೇರಿಸಿದರು. ಅಬ್ದುಲ್ ಖಾದರ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚುನಾವಣಾ ವೀಕ್ಷಕರಾಗಿ ಅಬ್ದುರ್ರಷೀದ್ ರಹ್ಮಾನಿ ಹಾಗೂ ಅಶ್ರಫ್ ಶೇಡಿಗುಂಡಿ ಆಗಮಿಸಿದರು. 2020-22 ನೇ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ ಮಂಡಿಸಿದರು. 2022-24 ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲ ಫೈಝಿ ಪೈಂಬಚ್ಛಾಲ್, ಉಪಾಧ್ಯಕ್ಷ ಇರ್ಷಾದ್ ಫೈಝಿ ಪಾಲ್ತಾಡ್, ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ, ಕೋಶಾಧಿಕಾರಿ ಅಕ್ಬರ್ ಕರಾವಳಿ, ವರ್ಕಿಂಗ್ ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್, ಇಬಾದ್ ಅಬ್ದುಲ್ ಖಾದರ್ ಫೈಝಿ, ವಿಖಾಯ ಷರೀಫ್ ಅಜ್ಜಾವರ, ಟ್ರೆಂಡ್ ಶಹೀದ್ ಪಾರೆ, ಸಹಚಾರಿ ಶರೀಫ್ ಭಾರತ್, ಸರ್ಗಲಯ ಸಿದ್ದೀಕ್ ಜೀರ್ಮುಖಿ, ತ್ವಲಬಾ ರಫೀಕ್ ಮುಸ್ಲಿಯಾರ್, ಕ್ಯಾಂಪಸ್ ವಿಂಗ್ ಅಬ್ದುರಹ್ಮಾನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಬಾಳಿಲ, ಜಮಾಲ್ ಕೆ.ಎಸ್, ಬಶೀರ್ ಯು.ಪಿ, ಫೈಝಲ್ ಜೀರ್ಮುಖಿ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಖಾದರ್ ಮೊಟ್ಟೆಗಾರ್, ಮುಹಮ್ಮದ್ ಕೆ.ಎ, ಮುಹಮ್ಮದ್ ಬಿ.ಎ, ಶಾಫಿ ಮುಕ್ರಿ, ಫೈಝಲ್ ಮಂಡೆಕೋಲ್ ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕೌನ್ಸಿಲ್ ಸದಸ್ಯರುಗಳಾಗಿ ಮುಹಮ್ಮದ್ ಕುಂಞಿ ಮೇನಾಳ, ಸಿದ್ದೀಕ್ ಬೋವಿಕ್ಕಾನ, ಖಲೀಲ್ ಮಂಡೆಕೋಲು, ಅಬ್ದುಲ್ ಖಾದರ್ ಎನ್, ಶಹೀದ್ ಪಾರೆ, ಕಲಂದರ್ ಎಲಿಮಲೆ, ತಾಜುದ್ದೀನ್ ಟರ್ಲಿ, ಇಕ್ಬಾಲ್ ಬಾಳಿಲ, ಜಮಾಲ್ ಬೆಳ್ಳಾರೆ, ಬಶೀರ್ ಯು.ಪಿ ರನ್ನು ಆರಿಸಲಾಯಿತು. ಅಕ್ಬರ್ ಕರಾವಳಿ ಸ್ವಾಗತಿಸಿ, ಆಶಿಕ್ ಸುಳ್ಯ ವಂದಿಸಿದರು.

Also Read  8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ 'ಕ್ಯಾಪ್ಟನ್' ಶ್ವಾನಗೆ ನಿವೃತ್ತಿ ಸನ್ಮಾನ

error: Content is protected !!
Scroll to Top