ಮರ್ಧಾಳ: ನೆಕ್ಕಿತ್ತಡ್ಕ ದರ್ಗಾದಲ್ಲಿ ಕಳ್ಳರ ಕೈಚಳಕ ➤ ಬೀಗ ಮುರಿದು ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಜ.31. ಇಲ್ಲಿನ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ದರ್ಗಾದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ದರ್ಗಾದ ಒಳಗಿದ್ದ ಹಣವನ್ನು ಕದ್ದೊಯ್ದಿದ್ದಾರೆ.

ರಾತ್ರಿ 3 ಗಂಟೆಯ ಸುಮಾರಿಗೆ ಬೈಕಿನಲ್ಲಿ ಆಗಮಿಸಿದ ಇಬ್ಬರು ಕಳ್ಳರು ದರ್ಗಾದ ಬೀಗವನ್ನು ಮುರಿದು ಒಳನುಗ್ಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಒಂದು ಬೀಗವನ್ನು ಮುರಿದಿರುವ ಕಳ್ಳರು, ಎರಡನೇ ಬೀಗವನ್ನು ಮುರಿಯಲಾಗದ ಕಾರಣ ಬಾಗಿಲಿನ ಚಿಲಕವನ್ನೇ ಮುರಿದಿದ್ದಾರೆ. ದರ್ಗಾದಲ್ಲಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚಿನ ಹಣವನ್ನು ಕಳ್ಳರು ಎಗರಿಸಿದ್ದಾರೆ.

Also Read  Shocking | ಹತ್ತು ದಿನದ ಮಗುವನ್ನು ಬಾವಿಗೆ ಎಸೆದು ಕೊಂದ ಹೆತ್ತ ತಾಯಿ

 

 

 

error: Content is protected !!
Scroll to Top