ಗೋಳಿತ್ತಡಿ: ಭಿನ್ನ ಕೋಮಿನ ಜೋಡಿಗೆ ತಂಡದಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಇಲ್ಲಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಪೇಟೆಯಲ್ಲಿ ಶನಿವಾರ ರಾತ್ರಿ ಅನ್ಯಕೋಮಿನ ವ್ಯಕ್ತಿಯ ಜೊತೆ ಮುಸ್ಲಿಂ ಮಹಿಳೆಯೋರ್ವಳು ಬೈಕಿನಲ್ಲಿ ತೆರಳಿದ್ದನ್ನು ಪ್ರಶ್ನಿಸಿ ಸ್ಥಳೀಯರ ತಂಡವೊಂದು ಹಲ್ಲೆ ನಡೆಸಿದೆ ಎಂದು ಕಡಬ ಠಾಣೆಗೆ ದೂರು ನೀಡಿದ ಘಟನೆ ಭಾನುವಾರದಂದು ನಡೆದಿದೆ.

ಕೊೖಲ ಗ್ರಾಮದ ಕುದುಲೂರು ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ಐತ್ತೂರು ಗ್ರಾಮದ ಕೆರ್ಮಾಯಿ ನಿವಾಸಿ ಸೆಲ್ವಂ ಎಂಬವರ ಪುತ್ರ ಬಾಲರಾಜ್(48) ಶನಿವಾರ ಉಪ್ಪಿನಂಗಡಿಯಿಂದ ಕುದುಲೂರಿಗೆ ಬರುವಾಗ ಸೋಮವಾರಪೇಟೆಯ ಮುಸ್ಲಿಂ ಮಹಿಳೆಯನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದನೆನ್ನಲಾಗಿದೆ. ಈ ಸಂದರ್ಭ ಗೋಳಿತ್ತಡಿಯಲ್ಲಿ ಬೈಕ್ ತಾಂತ್ರಿಕ ತೊಂದರೆಯಿಂದ ಕೆಟ್ಟು ನಿಂತಿದ್ದು, ಯುವತಿ ಬೈಕಿನಿಂದ ಕೆಳಗಿಳಿದು ಪಕ್ಕದಲ್ಲಿ ನಿಂತಿದ್ದಳು. ಮಹಿಳೆ ಸೋಮವಾರಪೇಟೆಯವಳಾಗಿದ್ದು ಆಕೆಯ ಸಂಬಂಧಿ ಕುದುಲೂರು ಮೂಲದ ರಝಾಕ್ ಎಂಬಾತನ ಮನೆಗೆ ಬರುವವಳಾಗಿದ್ದಳು. ಈಕೆಯ ಬರುವಿಕೆಗಾಗಿ ಇಕ್ಬಾಲ್ ಉಪ್ಪಿನಂಗಡಿಯಲ್ಲಿ ಕಾದು ರಾತ್ರಿ ಪ್ರಾರ್ಥನೆಗೆಂದು ಮಸೀದಿಗೆ ತೆರಳಲಿದ್ದ ಕಾರಣ ಉಪ್ಪಿನಂಗಡಿಯಿಂದ ಸ್ನೇಹಿತ ಬಾಲರಾಜ್ ಜೊತೆ ಮಹಿಳೆಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಇವರನ್ನು ಜತೆಯಾಗಿ ಕಂಡ ಸ್ಥಳೀಯರು ವಿಚಾರಿಸಿದ್ದು, ಸತ್ಯಾಂಶ ತಿಳಿಸಿದರೂ ನನಗೆ ಹಾಗೂ ಬಾಲರಾಜ್ ಅವರಿಗೆ ಹತ್ತು ಜನರ ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಹಲ್ಲೆಗೊಳಗಾದವರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Also Read  Windows 11 Professional - the Way to Obtain, Install And Activate?

error: Content is protected !!
Scroll to Top