ಭಾರತದ ಹೆಮ್ಮೆಯ ಆಟ ಕಬಡ್ಡಿ ➤ ಪಿ.ಎಸ್ ಪ್ರಕಾಶ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ಶಕ್ತಿನಗರದ ಶಕ್ತಿ ಪ.ಪೂ ಕಾಲೇಜಿನಲ್ಲಿ ಕಬಡ್ಡಿ ಕೋರ್ಟ್‍ನ್ನು ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್ ಪ್ರಕಾಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಬಡ್ಡಿ ಜಗತ್ತಿನಲ್ಲಿ ಭಾರತದ ಹೆಮ್ಮೆಯ ಆಟವಾಗಿದ್ದು, ಸಾಹಸ, ಧೈರ್ಯವನ್ನು ಪ್ರದರ್ಶಿಸುವ ಆಟ ಇದಾಗಿದೆ. ಇಂದು ಭಾರತದಲ್ಲಿ ಅತಿ ಹೆಚ್ಚು ಕಬಡ್ಡಿ ಆಟಗಾರರು ಇದ್ದಾರೆ. ಶಕ್ತಿ ಪಪೂ ಕಾಲೇಜಿನ ಕಬಡ್ಡಿ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು. ಪಠ್ಯದ ಜೊತೆಗೆ ಆಟಕ್ಕೆ ಸಮಾನವಾಗಿರುವ ಗೌರವವನ್ನು ಸಂಸ್ಥೆ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಕ್ತಿ ಪ.ಪೂ ಕಾಲೇಜಿನ ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳ ಕಬಡ್ಡಿಯನ್ನು ಆಯೋಜಿಸಲಾಗಿತ್ತು. ಪುತ್ತೂರಿನ ಮುಳಿಯ ಕೇಶವ ಪ್ರಸಾದ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಂಗಳೂರು ವಿವಿ ಕಬಡ್ಡಿ ತಂಡ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ವಿದ್ಯಾರ್ಥಿ ಕುಶ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಸಿ ನಾೈಕ್ ಪ್ರಧಾನ ಸಲಹೆಗಾರ ರಮೇಶ ಕೆ. ಅಭಿವೃದ್ಧಿಅಧಿಕಾರಿ ಪ್ರಖ್ಯಾತ್‍ ರೈ, ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

Also Read  ಸೀಲ್ ಡೌನ್ ಆದ ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ಕಡಬಕ್ಕೆ ಆಗಮನ ➤ ಆತಂಕದಲ್ಲಿ ಗ್ರಾಮಸ್ಥರು..!! ಯುವಕನಿಗೆ ಹೋಂ ಕ್ವಾರಂಟೈನ್

error: Content is protected !!
Scroll to Top