ಬಂಟ್ವಾಳ: ಅಂಗಡಿ ಯಾಕೆ ತಡವಾಗಿ ತೆರೆಯುತ್ತೀಯಾ? ಎಂದು ಪ್ರಶ್ನಿಸಿ ವ್ಯಕ್ತಿಗೆ ಚೂರಿ ಇರಿತ..!



(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 29. ಅಂಗಡಿ ತೆರೆಯುತ್ತಿದ್ದ ವೇಳೆ ಬಂದ ಅಂಗಡಿ ಮಾಲಕನು ಅಂಗಡಿಯನ್ನು ಯಾಕೆ ತಡವಾಗಿ ತೆರೆಯುತ್ತೀಯಾ? ಎಂದು ಕೇಳಿ ಹರಿತವಾದ ಆಯುಧದಿಂದ ಇರಿದು ಬೆದರಿಕೆ ಹಾಕಿದ ಘಟನೆ ಮೆಲ್ಕಾರಿನಲ್ಲಿ ನಡೆದಿದೆ.







ಗಾಯಗೊಂಡವರನ್ನು ಸದಕತುಲ್ಲಾ ಎಂದು ಗುರುತಿಸಲಾಗಿದೆ. ಈತ ಮೆಲ್ಕಾರ್ ನಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಬಟ್ಟೆ ಅಂಗಡಿಯೊಂದನ್ನು ಮಾಲಕ ನಿಸಾರ್ ಅಹಮ್ಮದ್ ರವರಿಂದ ಬಾಡಿಗೆಗಾಗಿ ಪಡೆದಿದ್ದನು. ಸದಕತುಲ್ಲಾ ಎಂದಿನಂತೆ ಅಂಗಡಿ ತೆರೆಯುತ್ತಿದ್ದ ವೇಳೆ ಅಲ್ಲಿಗೆ ಬಂದ ನಿಸಾರ್ ಅಂಗಡಿ ಯಾಕೆ ತಡವಾಗಿ ತೆರೆಯುತ್ತೀಯಾ ಎಂದು ಪ್ರಶ್ನಿಸಿ, ಆತನಲ್ಲಿದ್ದ ಆಯುಧದಿಂದ ಕಣ್ಣು, ಮೂಗು, ಕತ್ತು ಹಾಗೂ ಕಿವಿ ಮತ್ತು ಎದೆಯ ಭಾಗಕ್ಕೆ ಇರಿದಿದ್ದಲ್ಲದೇ ಮತ್ತೆ ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನನ್ನ ಕೊಲ್ಲುತ್ತೇನೆ ಎಂದು ಬೆದರಿಸಿದ್ದಾನೆ.‌ ಈ ಕುರಿತು ಬಂಟ್ವಾಳನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top