ಪಬ್-ಜಿ ಪ್ರಭಾವ ➤ ತಾಯಿ ಹಾಗೂ ಸಹೋದರ ಸಹೋದರಿಯನ್ನು ಹತ್ಯೆಗೈದ 14ರ ಬಾಲಕ..!

(ನ್ಯೂಸ್ ಕಡಬ) newskadaba.com ಲಾಹೋರ್, ಜ. 29. ಪಬ್‌ ಜಿ ಗೇಮ್ ಪ್ರಭಾವದಿಂದ 14 ವರ್ಷದ ಬಾಲಕನೋರ್ವ ಇಡೀ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

 

ಹತ್ಯೆಗೊಳಗಾದವರನ್ನು ತಾಯಿ ನಹೀದ್ ಮುಬಾರಕ್, ಮಗ ತೈಮೂರ್ ಮತ್ತೋರ್ವ ಸಹೋದರಿ ಎಂದು ಗುರುತಿಸಲಾಗಿದೆ. ಪಬ್‌ ಜಿ ವ್ಯಸನಿಯಾಗಿದ್ದ ಆರೋಪಿ ಬಾಲಕ ಆನ್‌ ಲೈನ್ ಗೇಮ್‌ ಪ್ರಭಾವದಿಂದ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಕಲಿಕೆಯ ಕಡೆ ಗಮನ ಕೊಡದೇ ಆನ್‌ ಲೈನ್ ಗೇಮ್‌ ನಲ್ಲಿ ಕಳೆಯುತ್ತಿದ್ದುದರಿಂದ ತಾಯಿಯು ಮಗನನ್ನು ಆಗಾಗ್ಗೆ ಗದರುತ್ತಿದ್ದರು. ಘಟನೆಯ ದಿನ ಕೂಡಾ ಮಗನನ್ನು ತಾಯಿ ಗದರಿದ್ದು, ಇದರಿಂದ ಸಿಟ್ಟಿಗೆದ್ದ ಬಾಲಕ ಕವಾಟಿನಲ್ಲಿದ್ದ ತಾಯಿಯ ಪಿಸ್ತೂಲ್‌ ಅನ್ನು ಕೈಗೆತ್ತಿಕೊಂಡು ತಾಯಿ ನಿದ್ರಿಸುತ್ತಿದ್ದ ವೇಳೆ ಆಕೆಯನ್ನು ಹತ್ಯೆ ಮಾಡಿದ್ದಲ್ಲದೆ, ಸಹೋದರ-ಸಹೋದರಿಯರನ್ನೂ ಹತ್ಯೆ ಮಾಡಿದ್ದಾನೆ. ಘಟನೆಯ ಮರುದಿನ ನೆರೆಮನೆಯವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Also Read  ದ್ವಿಚಕ್ರ ವಾಹನ ಪಲ್ಟಿ- ಕಡಬದ ಯುವಕನಿಗೆ ಗಾಯ

error: Content is protected !!
Scroll to Top