(ನ್ಯೂಸ್ ಕಡಬ) newskadaba.com ಮಂಗಳೂರು, ನ.07. ತನ್ನ ಖಾಸಗಿ ಜಮೀನಿನಲ್ಲಿ ವ್ಯಕ್ತಿಯೋರ್ವರು ಗಾಂಜಾ ಗಿಡವನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಮಂಗಳವಾರದಂದು ಮಂಗಳೂರಿನಲ್ಲಿ ನಡೆದಿದೆ.
ಆರೋಪಿಯನ್ನು ಕೋಡಿಕಲ್ ನಿವಾಸಿ ವಿನಿತ್ ಎಂದು ಗುರುತಿಸಲಾಗಿದ್ದು, ಇವರು ತನ್ನ ಜಮೀನಿನಲ್ಲಿ ಗಾಂಜಾ ಗಿಡವನ್ನು ಬೆಳೆಸಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.