ಸುಳ್ಯ: ನೂತನ ಸಚಿವರಿಂದ ನಾಳೆ (ಜ. 30) ಲೋಕಾರ್ಪಣೆಗೆ ಸಿದ್ದವಾದ ಅಕ್ಸಿಜನ್ ಘಟಕ..!

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ದವಾಗಿದೆ.

ಕೊರೋನಾ ಹಾವಳಿ ಮಿತಿಮೀರಿದ್ದ ಕಳೆದ ಎರಡು ವರ್ಷಗಳಲ್ಲಿ ಆಮ್ಲಜನಕ ಕೊರತೆಯಿಂದ ದೇಶಾದ್ಯಂತ ಹಲವಾರು ಮಂದಿ ಮೃತರಾಗಿದ್ದು, ಹೀಗಾಗಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಲು ಸರಕಾರ ಒತ್ತು ನೀಡಿದ್ದರಿಂದ ಕುದುರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪನಿಯ ಸಾಮಾಜಿಕ ಕ್ಷೇಮ ನಿಧಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ತೆರೆಯಲಾಗಿದೆ. ಇದರ ಉದ್ಘಾಟನೆಯನ್ನು ಜ. 30ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ.

Also Read  ಅ.18ರಂದು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

error: Content is protected !!