ಕಡಬ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಗೆ ಅವಮಾನ ➤ ನ್ಯಾಯಧೀಶರ ವಿರುದ್ದ ಸ್ವಯಂ ದೂರು ದಾಖಲಿಸುವಂತೆ ಭೀಮ್ ಆರ್ಮಿ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜ. 29. ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ಗೌಡ ತಮ್ಮ ವೃತ್ತಿಜೀವನಕ್ಕೆ ಅವಮಾನ ಮಾಡಿದ್ದಲ್ಲದೇ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೂ ಅವಮಾನ ಮಾಡಿರುವುದನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ಘಟಕದ ಭೀಮ್ ಆರ್ಮಿ ಸಂಘಟನೆಯು ತಹಶೀಲ್ದಾರ್ ಮೂಲಕ ಮುಖ್ಯ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಬೆಂಗಳೂರು ಮತ್ತು ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ.

ನ್ಯಾಯಾಧೀಶರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿ, ನ್ಯಾಯಾಂಗದ ಗೌರವವನ್ನು ಎತ್ತಿಹಿಡಿದು ಇವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಒತ್ತಾಯಿಸಿದ್ದಾರೆ. ಅಲ್ಲದೇ ತಮ್ಮ ವೃತ್ತಿಯಲ್ಲಿ ಇಲ್ಲಿಯವರೆಗೆ ನೀಡಿರುವ ಎಲ್ಲಾ ನ್ಯಾಯ ತೀರ್ಪುಗಳನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದೂ ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಕಡಬ ಅಧ್ಯಕ್ಷರಾದ ರಾಘವ ಕಳಾರ, ಉಪಾಧ್ಯಕ್ಷರಾದ ಯಶೋಧರ ನೀರಾಜೆ, ಪ್ರ.ಕಾರ್ಯದರ್ಶಿ ತಾರಾನಾಥ್ ಕಡಿರಡ್ಕ, ಸದಸ್ಯರಾದ ಚಿದಾನಂದ ಕಳಾರ, ತನಿಯಪ್ಪ ಬೆದ್ರೋಳಿ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡರಾದ ಎನ್.ವಿಶ್ವನಾಥ ಅಲೆಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.

Also Read  ತೊಕ್ಕೊಟ್ಟು: ಪೊಲೀಸರ ಸೂಚನೆಯಂತೆ ರಸ್ತೆ ಬದಿ ಲಾರಿಯನ್ನು ನಿಲ್ಲಿಸಿದ ಚಾಲಕ ► ನೋಡ ನೋಡುತ್ತಿದ್ದಂತೆಯೇ ನಡೆಯಿತು ಭೀಕರ ಘಟನೆ ► ಓರ್ವ ಮೃತ್ಯು - ಸ್ಥಳೀಯರಿಂದ ಪ್ರತಿಭಟನೆ

error: Content is protected !!
Scroll to Top