ಮಂಗಳೂರಿನಿಂದ ಬಾದಾಮಿಗೆ ಪ್ರಯಾಣಕ್ಕೆ ಮುಂದಾದ ಅನ್ಯಕೋಮಿನ ಜೋಡಿ..! ➤ ಬಜರಂಗದಳ ಕಾರ್ಯಕರ್ತರ ದಾಳಿ- ಜೋಡಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ‌. 29. ಮಂಗಳೂರಿನಿಂದ ಬಾದಾಮಿಗೆ ಕೋಚ್ ಬಸ್ ನಲ್ಲಿ ತೆರಳಲು ಹೊರಟಿದ್ದ ಅನ್ಯಕೋಮಿನ ಜೋಡಿಯೊಂದನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.


ಮೂಲತಃ ಬಾದಾಮಿ ಯುವತಿ ಇನೋಳಿಯಲ್ಲಿರುವ BIT ಕಾಲೇಜಿಗೆ ಸೇರ್ಪಡೆಯಾಗಲು ಬಂದಿದ್ದು, ಆಕೆಯ ಮನೆಯವರಿಗೆ ತನ್ನನ್ನು ಹಿಂದೂ ಎಂದು ನಂಬಿಸಿದ್ದ ಅನ್ಯಕೋಮಿನ ಯುವಕನೊಂದಿಗೆ ಯುವತಿಯನ್ನು ಕಳುಹಿಸಲು ಮನೆಯವರು ಒಪ್ಪಿದ್ದಾರೆ. ಬಳಿಕ ವಿದ್ಯಾರ್ಥಿನಿಗೆ ಗೊತ್ತಿಲ್ಲದೇ ಯುವಕ ಒಂದೇ ಕ್ಯಾಬಿನ್ ಲ್ಲಿ ಸ್ಲೀಪರ್ ಕೋಚ್ ಸೀಟ್ ಬುಕ್ ಮಾಡಿದ್ದಾನೆ. ಇದನ್ನರಿತು ಸ್ಥಳಕ್ಕೆ ಆಗಮಿಸಿದ ಭಜರಂಗದಳ ಕಾರ್ಯಕರ್ತರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಒಂಬತ್ತನೇ ತರಗತಿ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ..!

 

error: Content is protected !!
Scroll to Top