ರವಿ ಡಿ ಚನ್ನಣ್ಣನವರ್ ವರ್ಗಾವಣೆ ಆದೇಶವನ್ನು ದಿಢೀರ್ ತಡೆ ಹಿಡಿದ ಸರಕಾರ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ಒಂಬತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ರವಿ ಡಿ ಚನ್ನಣ್ಣನವರ್ ಅವರ ವರ್ಗಾವಣೆಗೆ ದಿಢೀರ್ ತಡೆ ನೀಡಿದೆ.

ಈಗಾಗಲೇ ರವಿ ಡಿ ಚನ್ನಣ್ಣನವರ್ ಅವರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಯಾಗಿ ವರ್ಗಾವಣೆ ಮಾಡಲಾಗಿದ್ದು, ಇದೀಗ ಅದಕ್ಕೆ ಸರಕಾರ ದಿಢೀರ್ ತಡೆ ಹಿಡಿದಿದೆ ಎನ್ನಲಾಗಿದೆ. ಇತ್ತೀಚೆಗೆ ರವಿ ಡಿ ಚನ್ನಣ್ಣನವರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ವಿರುದ್ದ ಗ್ರಾನೈಟ್ ಉದ್ಯಮಿಯೋರ್ವರು ವಂಚನೆ ದೂರು ನೀಡಿದ್ದರು. ಇದು ರಾಜ್ಯಾದ್ಯಂತ ಭಾರೀ ಚರ್ಚೆಹೆ ಕಾರಣವಾಗಿತ್ತು.

Also Read  ಪಡುಕೋಣೆ ಶ್ರೀ ರಾಮ ದೇವಸ್ಥಾನದಲ್ಲಿ ಕಳ್ಳತನ ➤ 1.5 ಲಕ್ಷ ಮೌಲ್ಯದ ಪ್ರಭಾವಳಿ ಕಳವು

error: Content is protected !!
Scroll to Top