ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿ ಪ್ರಾಣಬಿಟ್ಟ ಯುವಕ…!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 29. ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಯುವಕ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ನಡೆದಿದೆ.

ಮೃತ ಯುವಕನನ್ನು ಮುನ್ನೂರು ಗ್ರಾಮದ ಉಳಿಯ ನಿವಾಸಿ ಲಾಯ್ಡ್ ಡಿಸೋಜಾ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆಗೆ ಯತ್ನಿಸಿದ ಕೋಟೆಕಾರು ನಿವಾಸಿ ಅಶ್ವಿತಾ ಫೆರಾವೊ ಎಂಬಾಕೆಯನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Also Read  ಮಂಗಳೂರು ವಿವಿಯಲ್ಲಿ ಕೊರೋನಾ ಮಿತಿಮೀರಿದ ಹಿನ್ನೆಲೆ ➤ ಎ. 03ರ ವರೆಗೆ ತರಗತಿ ಬಂದ್

 

error: Content is protected !!
Scroll to Top