(ನ್ಯೂಸ್ ಕಡಬ) newskadaba.com ಕಡಬ, ಜ. 28. ಇಲ್ಲಿನ ಕಳಾರ ಸಮೀಪ ರಸ್ತೆ ಬದಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸಮತಟ್ಟು ಪ್ರದೇಶ ಉರಿದಿದ್ದು ಕಡಬ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಶುಕ್ರವಾರ ಮಧ್ಯಾಹ್ನದ ವೇಳೆ ಟ್ರಾನ್ಸ್ ಫಾರ್ಮರಿನಿಂದ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುತ್ತ ಮುತ್ತಲಿನ ಹುಲ್ಲು ತುಂಬಿದ ಪ್ರದೇಶಕ್ಕೆ ಬೆಂಕಿ ಹಬ್ಬಿತ್ತು. ಈ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ತೆರಳಿದ ಎಸ್.ಐ ರುಕ್ಮ ನಾಯ್ಕ್, ಎ.ಎಸ್.ಐ ಚಂದ್ರಶೇಖರ್, ಹೆಡ್ ಕಾನ್ಸ್ಟೇಬಲ್ ಭವಿತ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Also Read ಕೊನೆಗೂ ದೀಪಕ್ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ► ರುದ್ರಭೂಮಿ ತಲುಪಿದ ದೀಪಕ್ ಮೃತದೇಹ