ನಟ ರಕ್ಷಿತ್ ಸಹಿತ ‘ಗಟ್ಟಿಮೇಳ’ ತಂಡದ 7 ಮಂದಿಯ ವಿರುದ್ದ ಎಫ್ಐಆರ್…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 28. ಹೋಟೆಲ್ ನಲ್ಲಿ ಕುಡಿದು ಗಲಾಟೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಗಟ್ಟಿಮೇಳ ಧಾರವಾಹಿ ತಂಡದ ಏಳು ಮಂದಿಯ ವಿರುದ್ದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗಟ್ಟಿಮೇಳೆ ತಂಡದಿಂದ ನಾಗರಬಾವಿ ಸಮೀಪ ಶೂಟಿಂಗ್ ನಡೆಯುತ್ತಿದ್ದು, ನಟ ರಕ್ಷಿತ್ ಹಾಗೂ ಇತರ ಸದಸ್ಯರು ಹೋಟೆಲ್ ನಲ್ಲಿ ರಾತ್ರಿ ಒಂದು ಗಂಟೆಯ ವೇಳೆಗೆ ಕುಡಿದ ಮತ್ತಿನಲ್ಲಿ ಸ್ಥಳೀಯರಿಗೆ ಕಿರಿಕ್ ಮಾಡಿದ್ದಾರೆ. ಈ ಮಾಹಿತಿಯನ್ನು ಪಡೆದ ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ರಕ್ಷಿತ್, ನಾವು ಶೂಟಿಂಗ್ ಮಾಡೋಕೆ ಬಂದಿದ್ದು ಲೇಟ್ ಆಯ್ತು ಊಟಕ್ಕೆ ಬಂದಿದ್ದೇವೆ ಎಂದಿದ್ದಾರೆ. ಬಳಿಕ ಏಳು ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪಾನಮತ್ತರಾಗಿರುವುದು ತಿಳಿದುಬಂದಿದ್ದು, ಈ ಹಿನ್ನೆಲೆ ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ ಏಳು ಮಂದಿಯ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.

Also Read  ಕಾರ್ಕಳ: ತಾಯಿಯ ಅಕಾಲಿಕ ಸುದ್ದಿ ತಿಳಿದ ಮಗಳು ಆತ್ಮಹತ್ಯೆ

 

error: Content is protected !!
Scroll to Top