(ನ್ಯೂಸ್ ಕಡಬ) newskadaba.com ಉಡುಪಿ, ಜ. 28. ಮಿನುಗಾರಿಕೆಗೆ ತೆರಳಿದ್ದ ಶ್ರೀಮಹಾದೇವು 370 ಹೆಸರಿನ ದೋಣಿಯೊಂದು ಮಗುಚಿ ಬಿದ್ದ ಘಟನೆ ವರದಿಯಾಗಿದೆ.
ಮಲ್ಪೆ ಬಂದರಿನಿಂದ ಹೊರಟಿದ್ದ ದೋಣಿಯು ದಡದಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಕೆಳಭಾಗಕ್ಕೆ ಏನೋ ಬಡಿದ ಪರಿಣಾಮ ಮಗುಚಿಬಿದ್ದಿದೆ. ತಕ್ಷಣವೇ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ರಾಮದೂತ್ ಬೋಟಿನ ಮೀನುಗಾರರು ರಕ್ಷಣೆಗೆ ಮುಂದಾಗಿದ್ದು ಆರು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ದೋಣಿಯನ್ನು ದಡಕ್ಕೆ ಎಳೆಯಲು ಹರಸಾಹಸಪಟ್ಟರಾದರೂ ದೋಣಿಗೆ ನೀರು ನುಗ್ಗಿದ್ದರಿಂದ ದೋಣಿ ನೀರಿನಲ್ಲಿ ಮುಳುಗಿತ್ತು. ಪರಿಣಾಮ ಬೋಟ್, ಮೀನು ಹಿಡಿಯುವ ಬಲೆ, ಡೀಸೆಲ್ ಹಾಗೂ ಮೀನು ಹಿಡಿಯುವ ಸಲಕರಣೆಗಳ ಸಹಿತ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆನ್ನಲಾಗಿದೆ.
Also Read ಆಗಸ್ಟ್ 13 ರಂದು ಕಡಬದಲ್ಲಿ ಅಖಂಡ ಭಾರತ ಸಂಕಲ್ಪ ದಿನ ► ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ