ಜೆಸಿಐ ಸುಳ್ಯ ಸಿಟಿ ಪದಗ್ರಹಣ ಸಮಾರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 28. ಜೇಸೀಐ ಸುಳ್ಯ ಸಿಟಿಯ ನೂತನ ಅಧ್ಯಕ್ಷ ಬಶೀರ್ ಯು.ಪಿ ಹಾಗೂ ಅವರ ತಂಡದ ಪದಗ್ರಹಣ ಸಮಾರಂಭವು ಸುಳ್ಯ ದ ಪರಿವಾರಕಾನದಲ್ಲಿರುವ ಹೋಟೆಲ್ ಗ್ರಾಂಡ್ ಪರಿವಾರ್ ನಲ್ಲಿ ನಡೆಯಿತು.


ಇದರ ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಮತ್ತು ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಮತ್ತು ವಲಯ 15 ರ ಅಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತಾ ರವರು ಹಾಗೂ ಗೌರವ ಉಪಸ್ಥಿತರಾಗಿ ಸುಳ್ಯ ಸಿಟಿಯ ಸ್ಥಾಪಕ ಮನಮೋಹನ್ ಬಳ್ಳಡ್ಕ ಮತ್ತು ವಲಯ 15 ರ ಉಪಾಧ್ಯಕ್ಷರಾದ ರವಿಚಂದ್ರ ಪಾಟಾಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 10 ಸದಸ್ಯರು ಜೇಸೀ ತತ್ವಾದರ್ಶಗಳನ್ನು ಒಪ್ಪಿಕೊಂಡು ಜೇಸೀಐ ಗೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ ವಲಯಾಧಿಕಾರಿ ತೀರ್ಥವರ್ಣ ಬಳ್ಳಡ್ಕ ಉಪಸ್ಥಿತರಿದ್ದರು. ಚಂದ್ರಶೇಖರ ಕನಕಮಜಲು ಸ್ವಾಗತಿಸಿ ಶಶಿಧರ್ ಎಕ್ಕಡ್ಕ ವಂದಿಸಿದರು.

Also Read  ಇಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವರ ಪ್ರವಾಸ

 

 

 

 

 

error: Content is protected !!
Scroll to Top