ಪ.ಪಂಚಾಯತ್ ನ ಕ್ಷೇತ್ರ ವಿಂಗಡಣೆಯ ಕರಡು ಅಧಿಸೂಚನೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. ಕಿನ್ನಿಗೋಳಿ ಪಟ್ಟಣ ಪಂಚಾಯತ್‍ನ ನಿಗದಿ ಪಡಿಸಿದ 18 ವಾರ್ಡ್‍ಗಳಿಗೆ ಕ್ಷೇತ್ರ ವಿಂಗಡನೆಯ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಿಸಿದ್ದಾರೆ. ಅವರು ಕರ್ನಾಟಕ ಪುರಸಭೆ ಕಾಯ್ದೆ 1964 ಕಲಂ-13 ಮತ್ತು 252(2) ರಂತೆ ಈ ಅಧಿಸೂಚನೆ ಹೊರಡಿಸಿದ್ದಾರೆ.

 


ಕ್ಷೇತ್ರ ಎಂಗಡಣೆಯ ಕುರಿತು ಸಾರ್ವಜನಿಕರು ಅಕ್ಷೇಪಣೆ/ಸಲಹೆ ಸೂಚನೆಗಳಿದ್ದಲ್ಲಿ ಅವುಗಳನ್ನು ಲಿಖಿತವಾಗಿ, ನೇರವಾಗಿ ತಹಶೀಲ್ದಾರರ ಮುಖಾಂತರ ಈ ಕರಡು ಅಧಿಸೂಚನೆ ಪ್ರಕಟವಾದ 15 ದಿನದೊಳಗೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಕರ್ನಾಟಕ ಪುರಸಭೆಗಳ ಕಾಯ್ದೆ 1964 ಮತ್ತು ಸರಕಾರಿ ಆದೇಶಗಳ ಮಾರ್ಗಸೂಚಿಯನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ: ಎಸ್ಡಿಪಿಐ ನೂತನ ಕಛೇರಿ ಮತ್ತು ಸೇವಾಕೇಂದ್ರ ಉದ್ಘಾಟನೆ

 

 

error: Content is protected !!
Scroll to Top