ದ.ಕ. ಜಿಲ್ಲಾ ಶಾಖೆಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಜಾರಿಗೊಳಿಸಬೇಕು. ಎನ್.ಪಿ.ಎಸ್ ರದ್ದು, ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯಿಂದ ಶಾಸಕರಾದ ಡಾ. ಭರತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ, ಕಾರ್ಯದರ್ಶಿ ಎಚ್. ಗಣೇಶ್ ರಾವ್, ಖಜಾಂಜಿ ಅಕ್ಷಯ್ ಭಂಡಾರ್‍ಕರ್, ರಾಜ್ಯಪರಿಷತ್ ಸದಸ್ಯರಾದ ಶ್ರೀಮತಿ ಶೆರ್ಲಿ ಸುಮಾಲಿನಿ, ಉಪಾಧ್ಯಕ್ಷ ದೇವದಾಸ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೀಶ್ ಮೊಯಿಲಿ, ಗಣೇಶ್ ಸುವರ್ಣ ಹಾಗೂ ವಿವಿಧ ಇಲಾಖೆಯ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

Also Read  ಹಗಲು ಐಎಎಸ್ ಅಧಿಕಾರಿಯ ಕಾರು ಚಾಲಕ, ರಾತ್ರಿ ಸ್ನೇಹಿತರೊಡನೆ ಸರ ಕಳ್ಳತನ ► ಖತರ್ನಾಕ್ ಕಳ್ಳ ಇದೀಗ ಪೊಲೀಸರ ಅತಿಥಿ

 

 

error: Content is protected !!
Scroll to Top