(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. 73ನೇ ವರ್ಷದ ಆಝಾದಿ ಕಿ ಅಮೃತ್ ಮಹೋತ್ಸವದ ಅಂಗವಾಗಿ ಖಾದಿ ಗ್ರಾಮೋದ್ಯೋಗ ಆಯೋಗವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೃಹ ಕೈಗಾರಿಕಾ ಉತ್ಪನ್ನಗಳ ಮೇಳವನ್ನು ಹಮ್ಮಿಕೊಂಡಿದೆ.
ರೇಷ್ಮೆ ಸೀರೆ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗದ ಅಡಿಯಲ್ಲಿ ಉತ್ಪಾದಿಸಿರುವ ಗೃಹ ಕೈಗಾರಿಕಾ ಉತ್ಪನ್ನಗಳ ಮಳಿಗೆಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥ ಧರ್ಮೇಶ್ ಮೆಹ್ತಾ ಹಾಗೂ ಬೆಂಗಳೂರು ಎಮ್.ಎಸ್.ಎಮ್.ಇ. ಖಾದಿ ಗ್ರಾಮೋದ್ಯೋಗ ಆಯೋಗದ ನಿರ್ದೇಶಕರಾದ ಸೆಂಥಿಲ್ ಕುಮಾರ್ ರಾಮಸ್ವಾಮಿ ನೇತೃತ್ವದಲ್ಲಿ ಮೇಳಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಗೃಹ ಕೈಗಾರಿಕಾ ಉತ್ಪನ್ನಗಳನ್ನು ಒಂದು ತಿಂಗಳು ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಲಾಗುತ್ತಿದೆ. ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರ ಗಮನ ಸೆಳೆಯಲು ಹಾಗೂ ಗಡಿ ಕೈಗಾರಿಕಾ ಉತ್ಪನ್ನಗಳನ್ನು ಸ್ವದೇಶದಲ್ಲಿಯೇ ಉತ್ಪಾದಿಸಿ ಮಾರಾಟ ಮಾಡುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು, ಅದನ್ನು ನನಸು ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.