ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 27. ವಿಧಾನ ಪರಿಷತ್ ನ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಸದಸ್ಯ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷವಾಯಿತು. ಇದರಿಂದ ಶಿವಕುಮಾರ್ ಹಾಗೂ ಹರಿ ಪ್ರಸಾದ್ ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದರು. ಆದಷ್ಟು ಬೇಗ ಎಂ ಎಲ್ ಸಿ ಗೆ ರಾಜೀನಾಮ ನೀಡುತ್ತೇನೆ. ಈ ಬಗ್ಗೆ ಜೆಡಿಎಸ್ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.

Also Read  ಮೇ 29 ರಿಂದ  ಪ್ರಾಥಮಿಕ, ಪ್ರೌಢಶಾಲೆ ತರಗತಿಗಳು ಆರಂಭ ➤ ಶಿಕ್ಷಣ ಇಲಾಖೆ ಸೂಚನೆ.!

 

error: Content is protected !!
Scroll to Top