ಸ್ಟೇರಿಂಗ್ ತುಂಡಾಗಿ ಪಲ್ಟಿಯಾದ ಬಸ್.! ➤ 20 ಮಂದಿ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಧಾರವಾಡ, ಜ. 27. ಬಸ್ ಸ್ಟೇರಿಂಗ್ ತುಂಡಾಗಿ ಪಲ್ಟಿಯಾದ ಪರಿಣಾಮ 20 ಮಂದಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಬೆಣ್ಣೆಹಳ್ಳದ ಹತ್ತಿರ ನಡೆದಿದೆ.


ಬಾಗಲಕೋಟೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ ನ ಸ್ಟೇರಿಂಗ್ ತುಂಡಾಗಿ ಬಸ್ ಪಲ್ಟಿಯಾದ ಪರಿಣಾಮ ಪಕ್ಕದಲ್ಲಿದ್ದ ಹೊಲಕ್ಕೆ ನುಗ್ಗಿ ಹಳ್ಳಕ್ಕೆ ಬಿದ್ದಿದೆ. ಪರಿಣಾಮ ಬಸ್ಸಿನಲ್ಲಿದ್ದ 30 ಮಂದಿಯ ಪೈಕಿ 20 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ದ.ಕ: 8 ಹೊಸ ಕೊರೋನಾ ಸೋಂಕು ಪತ್ತೆ ➤ ಒಬ್ಬರ ಸ್ಥಿತಿ ಗಂಭೀರ

 

 

error: Content is protected !!
Scroll to Top