ಗೋಣಿಚೀಲದಲ್ಲಿದ್ದ ಮಹಿಳೆಯ ಮೃತದೇಹವನ್ನು ಎಳೆದಾಡಿ ತಿನ್ನುತ್ತಿದ್ದ ಬೀದಿನಾಯಿಗಳು..! ➤ ಮನಕಲುಕುವ ದೃಶ್ಯ

(ನ್ಯೂಸ್ ಕಡಬ) newskadaba.com ಮೀರತ್, ಜ. 27. ಬುರ್ಖಾ ಧರಿಸಿದ್ದ ಮಹಿಳೆಯೋರ್ವರ ಮೃತದೇಹವು ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ನಾಯಿಗಳು ಅದನ್ನು ಎಳೆದಾಡಿ ತಿನ್ನಲು ಯತ್ನಿಸುತ್ತಿದ್ದ ಘಟನೆ ಮೀರತ್ ಜಿಲ್ಲೆಯ ಪರ್ತಾಪುರ್ ಪ್ರದೇಶದಲ್ಲಿ ಕಂಡುಬಂದಿದೆ.


ಮೃತದೇಹವಿದ್ದ ಗೋಣಿಚೀಲವನ್ನು ನಾಯಿಗಳು ಎಳೆದಾಡುತ್ತಾ ತಿನ್ನಲು ಪ್ರಯತ್ನಿಸಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಗೋಣಿಚೀಲ ತೆರೆದು ನೋಡಿದಾಗ ಬುರ್ಖಾ ಧರಿಸಿದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ, ಬೇರೆ ಕಡೆ ಮಹಿಳೆಯನ್ನು ಕೊಂದು ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ವಿವೇಕ್ ಯಾದವ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಹೈದರಾಬಾದ್ ಎನ್ ಕೌಂಟರ್ ಸ್ಥಳಕ್ಕೆ ಎನ್ಎಚ್ಆರ್ ಸಿ ತಂಡ ಭೇಟಿ

 

error: Content is protected !!
Scroll to Top