ಕೊರೋನಾ‌ ಆರ್ಥಿಕ ನಷ್ಟ- ಕುಗ್ಗಿ ಹೋದ ಸಾರಿಗೆ ನಿಗಮ ➤ ವಿಲೀನಗೊಳಿಸುವ ಪ್ರಸ್ತಾಪಕ್ಕೆ ಮುಂದಾದ ರಾಜ್ಯ ಸರಕಾರ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 27. ಕೊರೋನಾ ಹಿನ್ನೆಲೆ ಸರಕಾರ ವಿಧಿಸಿರುವಂತಹ ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ನಿಯಮಗಳಿಂದಾಗಿ ರಾಜ್ಯದಲ್ಲಿ ವ್ಯಾಪಾರ ಕ್ಷೇತ್ರಗಳು ಆರ್ಥಿಕ ನಷ್ಟದಲ್ಲಿದ್ದು ಇದರ ಪೈಕಿ ನಾಲ್ಕು ಸಾರಿಗೆ ಕ್ಷೇತ್ರಗಳು ನಷ್ಟದ ಭೀತಿಯಲ್ಲಿದ್ದು ನೌಕರರಿಗೆ ಸಂಬಳ ಕೊಡಲಾಗದ ಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗರ ನಿಗಮಗಳನ್ನು ವಿಲೀನಗೊಳಿಸುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ.


ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಕಂಗೆಟ್ಟಿರುವ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ವಾಯುವ್ಯ ಸಾರಿಗೆ ನಿಗಮಗಳನ್ನು ಒಂದೇ ನಿಯಮವಾಗಿ ವಿಲೀನಗೊಳಿಸಲು ಸಾರಿಗೆ ಇಲಾಖೆಗೆ ಸಲಹೆ ನೀಡಿದೆ. ನಾಲ್ಕಿ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಮಾಡುವಂತೆ ಟ್ರಾನ್ಪೋರ್ಟ್ ಪೇಡರೇಶನ್ ಸಲಹೆ ನೀಡಿದೆ. ಐಎಎಸ್ ಶ್ರೀನಿವಾಸ್ ಮೂರ್ತಿ ಅವರ ಒನ್ ಮ್ಯಾನ್ ನೇತೃತ್ವದ ಕಮಿಟಿಯಲ್ಲಿ ಇದರ ಅಧ್ಯಯನ ನಡೆಸಿ ಬಳಿಕ ವರದಿ ಸಿದ್ದಪಡಿಸಿದೆ. ಕೊರೋನಾ ಬಂದಾಗಿನಿಂದ ಸಾರಿಗೆ ನಿಗಮ ಆರ್ಥಿಕವಾಗಿ ಕುಗ್ಗಿ ಹೋಗಿದ್ದು, ಬಸ್ ನಿರ್ವಹಣೆ, ಡಿಪೋ ಖರ್ಚು ಹಾಗೂ ನೌಕರರ ಸಂಬಳಕ್ಕೂ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ. 1961ರಲ್ಲಿ ಆರಂಭವಾದ ಕೆಎಸ್ಸಾರ್ಟಿಸಿ 1997ರಲ್ಲಿ ವಿಂಗಡಣೆಯಾಗಿತ್ತು. ಆದರೆ ಈ ವೇಳೆ ವಿಂಗಡಣೆ ಬೇಡ ಎಂದು ಫೆಡರೇಶನ್ ಮನವಿ ಮಾಡಿತ್ತು. ಆದರೂ ರಚನೆಯಾದ ವಿಭಾಗಗಳಿಂದ ಆರ್ಥಿಕ ನಷ್ಟ ಹೆಚ್ಚಿದೆ. ಹೀಗಾಗಿ ವಿಲೀನಗೊಳಿಸುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಗಿದ್ದು, ಆದರೆ ಇದಕ್ಕೆ ಸರಕಾರ ಯಾವ ರೀತಿ ಸ್ಪಂದನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Also Read  ಜುಲೈ 7ರಂದು ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ

 

 

error: Content is protected !!
Scroll to Top