ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ದಂಪತಿ ಆತ್ಮಹತ್ಯೆ..! ➤ ಉಪ್ಪಿನಂಗಡಿಯಲ್ಲಿ ಯುವಕನ ಆತ್ಮಹತ್ಯೆ ಬೆನ್ನಲ್ಲೇ ನಡೆದ ಘಟನೆ…!

(ನ್ಯೂಸ್ ಕಡಬ) newskadaba.com ಮೈಸೂರು, ಜ. 27. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಇದೇ ರೀತಿ ಆರ್ಥಿಕ ಸಂಕಷ್ಟಕ್ಕೊಳಗಾದ ಮೈಸೂರಿನ ದಂಪತಿ ಆತ್ಮಹತ್ಯೆ ಶರಣಾದ ಘಟನೆ ಉದಯಗಿರಿ ಬಳಿಯ ಸಾತಗಳ್ಳಿ ಲೇಔಟ್ ಎಂಬಲ್ಲಿ ವರದಿಯಾಗಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ಸಂತೋಷ್ ಹಾಗೂ ಪತ್ನಿ ಭವ್ಯ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಸಂತೋಷ್ ದಂಪತಿ ಕೆಲವು ದಿನಗಳಿಂದ ನಷ್ಟ ಅನುಭವಿಸಿ, ಸಾಲ ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೇ ಮನನೊಂದ ದಂಪತಿ ಊಟಕ್ಕೆ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆಯ ದಿನ ದ.ಕ ಜಿಲ್ಲೆಯ ಯುವಕನೋರ್ವ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ದಂಪತಿ ಆತ್ಮಹತ್ಯೆಗೆ ಒಳಗಾಗಿದ್ದಾರೆ.

Also Read  ಜನವರಿ 29 ರಿಂದ 30 ರವರೆಗೆ ಸಚಿವ ಕೆ. ಎಸ್. ಈಶ್ವರಪ್ಪರವರ ಪ್ರವಾಸ

 

 

 

error: Content is protected !!
Scroll to Top