ಕಡಬ: ತಹಶೀಲ್ದಾರ್ ಕಚೇರಿ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

ನ್ಯೂಸ್ ಕಡಬ) newskadaba.com ಕಡಬ, ಜ. 26. ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು.


ಧ್ವಜಾರೋಹಣವನ್ನು ಕಡಬ ತಹಶೀಲ್ದಾರ್ ಅನಂತ್ ಶಂಕರ್ ಅವರು ನೆರವೇರಿಸಿ ಗಣರಾಜ್ಯೋತ್ಸವದ ಬಗ್ಗೆ ಸಂದೇಶವನ್ನು ನೀಡಿದರು. ಕಡಬ ಠಾಣಾ ಎಸ್.ಐ ರುಕ್ಮನಾಯಕ್ ಮತ್ತು ಸಿಬ್ಬಂದಿಗಳು ಕವಾಯತು ನಡೆಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಕೆ.ಟಿ ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪ.ಪಂ. ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು

 

 

 

 

error: Content is protected !!
Scroll to Top