Breaking: ಕೃಷಿ ಕ್ಷೇತ್ರದ ಸಾಧನೆಗೆ ಕರಾವಳಿಗೆ ಒಲಿದ ದೇಶದ ಅತ್ಯುನ್ನತ ಗೌರವ ‘ಪದ್ಮಶ್ರೀ ಪುರಸ್ಕಾರ’ ➤ ಸುರಂಗ ಕೊರೆದು ನೀರು ಹರಿಸಿದ ವಿಟ್ಲದ ಮಹಾಲಿಂಗ ನಾಯ್ಕರಿಗೆ ಗೌರವ ಸಂದಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಜ.25. ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಪುರಸ್ಕಾರವು ಈ ಬಾರಿ ಕರಾವಳಿಗೆ ಒಲಿದಿದ್ದು, ಇಲ್ಲಿನ ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕಗೆ ಪದ್ಮಶ್ರೀ ಗೌರವ ಸಂದಿದೆ.

ಸುರಂಗ ಕೊರೆದು ಕೃಷಿ ಭೂಮಿಗೆ ನೀರು ತರಿಸಿದ್ದ ಬಂಟ್ವಾಳ ತಾಲೂಕಿನ ವಿಟ್ಲದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ರವರನ್ನು ಈ ಬಾರಿ ಪದ್ಮಶ್ರೀ ಗೌರವ ಹುಡುಕಿಕೊಂಡು ಬಂದಿದೆ. ಕೃಷಿ ಕ್ಷೇತ್ರದ ಸಾಧನೆಗೆ ಈ ಗೌರವ ಒಲಿದಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕರ್ನಾಟಕದ ಐವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಈ ಹಿಂದೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಒಲಿದಿತ್ತು.

Also Read  SDPI ಮಂಗಳೂರು ವಿಧಾನಸಭಾ ಕ್ಷೇತ್ರದ ಸಮಾವೇಶ ➤ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಭಾಗಿ

 

 

error: Content is protected !!
Scroll to Top