73ನೇ ಗಣರಾಜ್ಯೋತ್ಸವ ಹಿನ್ನೆಲೆ ➤ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 25. 73ನೇ ಗಣರಾಜೋತ್ಸವದ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಿಸಿದ್ದು, ಈ ಪೈಕಿ ರಾಜ್ಯದ 19 ಅಧಿಕಾರಿಗಳಿಗೆ ಪದಕ ಘೋಷಿಸಲಾಗಿದೆ.


ರಾಜ್ಯದ ಗುಪ್ತಚರ ದಳದ ಮುಖ್ಯಸ್ಥ ಎಡಿಜಿಪಿ ದಯಾನಂದ ಅವರಿಗೆ ವಿಶಿಷ್ಟ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ಪದಕ ದೊರೆತಿದೆ. ಹಾಗೂ ಅವರ ಜೊತೆಗೆ ಮತ್ತು ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಹಿತೇಂದ್ರ ಅವರಿಗೂ ವಿಶಿಷ್ಟ ರಾಷ್ಟ್ರಪತಿಗಳ ಪೊಲೀಸ್ ಪದಕ ದೊರೆತಿದೆ. ದೇಶದ 939 ಪೊಲೀಸ್ ಸಿಬ್ಬಂದಿಗಳ ಪೈಕಿ 189 ಅಧಿಕಾರಿಗಳ ಶೌರ್ಯಕ್ಕಾಗಿ ಪದಕ ನೀಡಿದರೆ, 88 ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ಪದಕ ಘೋಷಿಸಲಾಗಿದೆ. 662 ಮಂದಿಗೆ ಗೌರವಾನ್ವಿತ ಸೇವೆಗಾಗಿ ಪೊಲೀಸ್ ಪದಕ ಘೋಷಿಸಿದ್ದು, ಪ್ರಶಸ್ತಿಗೆ ಆಯ್ಕೆಯಾದ ಎಲ್ಲಾ ಅಧಿಕಾರಿಗಳು ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Also Read  ಸಿಎಂ ಸಿದ್ದರಾಮಯ್ಯ ಇಂದು ಮಂಗಳೂರಿಗೆ

 

error: Content is protected !!
Scroll to Top