ಸುಳ್ಯ: ಅಕ್ರಮ ಗೋಸಾಗಾಟ ➤ 25ಕ್ಕೂ ಅಧಿಕ ಗೋವುಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 25. ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಸಂಪಾಜೆ ಗೇಟಿನಲ್ಲಿ ತಪಾಸಣಾ ನಿರತ ಸಿಬ್ಬಂದಿಗಳು ಬಂಧಿಸಿದ ಘಟನೆ ನಡೆದಿದೆ.

ಸೋಮವಾರದಂದು ರಾತ್ರಿ ಸಂಪಾಜೆ ಗೇಟಿನಲ್ಲಿ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಈಚರ್ ಲಾರಿ ಚಾಲಕನನ್ನು ವಿಚಾರಿಸಿದಾಗ ದನದ ಫುಡ್ ಸಾಗಾಟ ಮಾಡುವ ಲಾರಿ ಎಂದು ಹೇಳಿದ್ದು, ಅನುಮಾನಗೊಂಡ ಗೇಟು ಸಿಬ್ಬಂದಿ ಇಣುಕಿ ನೋಡಿದಾಗ ಫುಡ್ ಜೊತೆಗೆ 25ಕ್ಕೂ ಹೆಚ್ಚು ದನಗಳು ಕಂಡುಬಂದಿವೆ. ಚಾಲಕನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಚಾಲಕ ಹಾಗೂ ಲಾರಿಯಲ್ಲಿದ್ದ ಇನ್ನೋರ್ವ ಪರಾರಿಯಾಗಿದ್ದಾರೆ. ಲಾರಿ ಸಿಬ್ಬಂದಿಗಳ ವಶದಲ್ಲಿದ್ದು, ಇದರ ಕುರಿತು ಇಲಾಖಾ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Also Read  ಬೆಂಗಳೂರಿನಲ್ಲಿ ಮುಂದಿನ ವರ್ಷದಿಂದ ನೀರಿನ ದರ ಹೆಚ್ಚಳ ಸಾಧ್ಯತೆ

 

 

error: Content is protected !!
Scroll to Top