ಸುಳ್ಯ: ಮಗನ ಎದೆಗೆ ಕತ್ತಿಯಿಂದ ಕಡಿದ ತಂದೆ…! ➤ ಮಗ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 25. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದು ಬಳಿಕ ತಂದೆಯೇ ಮಗನ ಎದೆಗೆ ಕತ್ತಿಯಿಂದ ಇರಿದ ಘಟನೆ ತಾಲೂಕಿನ ಅಲೆಟ್ಟಿ ಗ್ರಾಮದ. ಗುಂಡ್ಯ ಎಂಬಲ್ಲಿ ನಡೆದಿದೆ.


ಗಾಯಗೊಂಡವರನ್ನು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ತಂದೆ ಐತಪ್ಪ ನಾಯ್ಕ್ ಹಾಗೂ ಮಗ ಜಯಪ್ರಕಾಶ್ ನಡುವೆ ಮಾತಿನ ಚಕಮಕಿ ನಡುವೆ ಹೊಡೆದಾಟ ನಡೆದು, ತಂದೆಯೇ ಮಗನ ಎದೆಗೆ ಕತ್ತಿಯಿಂದ ಕಡಿದಿದ್ದು, ಪರಿಣಾಮ ಗಂಭೀರ ಗಾಯಗೊಂಡು ವಿಪರೀತ ರಕ್ತಸ್ರಾವಕ್ಕೊಳಗಾಗಿದ್ದು, ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Also Read  ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ನೀತಿ ಸಂಹಿತೆ ಪರಿಣಾಮ ದರ ಪರಿಷ್ಕರಣೆ ಮುಂದೂಡಿಕೆ..!!

error: Content is protected !!
Scroll to Top