(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 25. ಮುಖ್ಯಮಂತ್ರಿಯಾಗಿ ಐದು ತಿಂಗಳು ಪೂರ್ಣಗೊಳಿಸಿದ ಬಳಿಕ ರಾಜ್ಯದ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದ್ದಾರೆ.
ಈ ಕುರಿತು ಅಧಿಕೃತ ಘೋಷಣೆ ಹೊರಡಿಸಿರುವ ರಾಜ್ಯ ಸರಕಾರ, ರಾಜ್ಯದ 28 ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕಗೊಳಿಸಿದೆ. ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಉಸ್ತುವಾರಿ ಸಚಿವರ ನೇಮಕ ಮಾಡಲಾಗಿದೆ. ಉಸ್ತುವಾರಿ ಸಚಿವರಿಗೆ ಇದುವರೆಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ನ. 01ರಂದು ಧ್ವಜಾರೋಹಣ ಮಾಡಲು ಮಾತ್ರ ಉಸ್ತುವಾರಿ ನೀಡಲಾಗಿತ್ತು. ಇದೀಗ ಉಸ್ತುವಾರಿ ಸಚಿವರನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಲಾಗಿದ್ದು, ಆದರೆ ಪ್ರಮುಖ ಸಚಿವರಾಗಿರುವ ಆರ.ಅಶೋಕ್ ಹಾಗೂ ಮಾಧುಸ್ವಾಮಿ ಅವರಿಗೆ ಯಾವುದೇ ಉಸ್ತುವಾರಿ ನೀಡಿಲ್ಲ.
ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ :
ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಕೆ.ಎಸ್. ಈಶ್ವರಪ್ಪ -ಚಿಕ್ಕಮಗಳೂರು
ಬಿ. ಶ್ರೀರಾಮುಲು – ಬಳ್ಳಾರಿ
ವಿ. ಸೋಮಣ್ಣ – ಚಾಮರಾಜನಗರ
ಉಮೇಶ್ ವಿ. ಕತ್ತಿ – ವಿಜಯಪುರ
ಎಸ್. ಅಂಗಾರ – ಉಡುಪಿ
ಆರಗ ಜ್ಞಾನೇಂದ್ರ – ತುಮಕೂರು
ಡಾ. ಸಿ.ಎನ್. ಅಶ್ವತ್ಥ ನಾರಾಯಣ – ರಾಮನಗರ
ಸಿ.ಸಿ. ಪಾಟೀಲ್ – ಬಾಗಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚೌವ್ಹಾಣ್ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರಗಿ
ಶಿವರಾಮ್ ಹೆಬ್ಬಾರ್ – ಹಾವೇರಿ
ಎಸ್.ಟಿ. ಸೋಮಶೇಖರ್ – ಮೈಸೂರು
ಬಿ.ಸಿ. ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಬಿ.ಎ. ಬಸವರಾಜ – ದಾವಣಗೆರೆ
ಡಾ. ಕೆ. ಸುಧಾಕರ್ – ಬೆಂಗಳೂರು ಗ್ರಾಮಾಂತರ
ಕೆ. ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣ ಗೌಡ – ಶಿವಮೊಗ್ಗ
ಬಿ.ಸಿ. ನಾಗೇಶ್ – ಕೊಡಗು
ವಿ. ಸುನೀಲ್ ಕುಮಾರ್ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ – ಧಾರವಾಡ
ಶಂಕರ್ ಬಿ. ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ