ಇತ್ತೀಚೆಗೆ ನಡೆದ ಗ್ರಾಮ ಸಭೆಯನ್ನು ಅಮಾನ್ಯಗೊಳಿಸಿ ಮತ್ತೊಮ್ಮೆ ಗ್ರಾಮ ಸಭೆ ನಡೆಸುವಂತೆ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಜನವರಿ 11 ರಂದು ಸಂಪಾಜೆ ಗ್ರಾಮ ಪಂಚಾಯತ್ ನಡೆಸಿದ ಗ್ರಾಮ ಸಭೆಯು ಪಂಚಾಯತ್ ರಾಜ್ ಅಧಿನಿಯಮದಂತೆ ಸಾರ್ವಜನಿಕರ ಪ್ರಶ್ನೆಗಳಿಗೆ ಅವಕಾಶ ನೀಡಿರುವುದಿಲ್ಲ. ವರದಿ ವಾಚನದ ನಂತರ ವರದಿಗೆ ಸಂಬಂಧಪಟ್ಟ ವಿಷಯದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳಲು ಸಾರ್ವಜನಿಕರಿಗೆ (ಗ್ರಾಮಸ್ಥರಿಗೆ) ಅವಕಾಶ ನೀಡಿ ಆದರ ನಂತರ ಇಲಾಖಾಧಿಕಾರಿಗಳಲ್ಲಿ ಪ್ರಶ್ನೆಗಳನ್ನು ಕೇಳಲು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಲು ನೋಡಲ್ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಕೆಲವು ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸೌಜನ್ಯತೆ ಕೂಡಾ ಅಧಿಕಾರಿಗಳು ತೋರಿಸಲಿಲ್ಲ. ವೇದಿಕೆಯಲ್ಲಿ ಕುಳಿತ ಜನಪ್ರತಿನಿಧಿಗಳು ತಮಗೆ ಇಷ್ಟ ಬಂದ ಹಾಗೆ ಸಭೆಯನ್ನು ಮುಗಿಸಿದರು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನೋಡಲ್ ಅಧಿಕಾರಿಗಳಾದ ಶ್ರೀಮತಿ ಸುಹಾನ ಪಿ.ಕೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ತೋಟಗಾರಿಕಾ ಇಲಾಖೆ ಸುಳ್ಯ ಇವರಿಗೆ ಕಷ್ಟ ಆದಾಗ ಏಕಾಏಕಿ ಎದ್ದು ನಿಂತು ರಾಷ್ಟ್ರಗೀತೆ ಹಾಡಿ ಸಭೆಯನ್ನು ಕೊನೆಗೊಳಿಸಿದ್ದು ಸಂಪೂರ್ಣವಾಗಿ ಅಸಂವಿಧಾನಿಕವಾಗಿದೆ.

Also Read  ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ

 

ಗ್ರಾಮಸ್ಥರಿಗೆ ಅಪರೂಪವಾಗಿ ಸಿಗುವ ಅವಕಾಶವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಸಿದುಕೊಂಡಿದ್ದು, ಇದು ಸಂಪೂರ್ಣವಾಗಿ ಪಂಚಾಯತ್ ರಾಜ್ ವ್ಯವಸ್ಥೆಗೆ ವಿರೋಧವಾಗಿದೆ. ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸಿದಂತಿದೆ. ಆದುದರಿಂದ ಸಂಬಂಧಪಟ್ಟವರು ಕೂಡಲೇ ಈ ಮೊದಲು ನಡೆದ ಗ್ರಾಮ ಸಭೆಯನ್ನು ಅಮಾನ್ಯ ಗೊಳಿಸಿ, ತುರ್ತಾಗಿ ಮತ್ತೊಂದು ಗ್ರಾಮ ಸಭೆಯನ್ನು ಕರೆಯಬೇಕೆಂದು ಆಗ್ರಹಿಸಿ ಎಸ್ಡಿಪಿಐ ಸಂಪಾಜೆ ವಲಯ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ಸದಸ್ಯರಾದ ಅಶ್ರಫ್ ಟರ್ಲಿ, ಕಡೇಪಾಲ ಬೂತ್ ಅಧ್ಯಕ್ಷರಾದ ಸಾಜಿದ್ ಐ.ಜಿ, ಕಾರ್ಯಕರ್ತರಾದ ಸಲೀಮ್ ದರ್ಕಾಸ್, ಮರ್ಝೂಕ್ ಕಡೆಪಾಲ ಮೊದಲಾದವರು ಉಪಸ್ಥಿತರಿದ್ದರು.

Also Read  ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಪತ್ತೆ…!      ➤  ಪತಿಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

 

 

error: Content is protected !!
Scroll to Top