(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ಕರ್ನಾಟಕದ ಪ್ಯಾರಾ ಮೆಡಿಕಲ್ ಬೋರ್ಡ್ 2010-21 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಪ್ರಥಮ ವರ್ಷದ ಡಿಎಂಐಟಿ ಹಾಗೂ ತೃತೀಯ ವರ್ಷದ ಡಿಎಮ್.ಎಲ್.ಟಿಯ ಎಲ್ಲಾ ವಿದ್ಯಾರ್ಥಿಗಳ ಉತ್ತೀರ್ಣತೆಯೊಂದಿಗೆ ಕಾಲೇಜಿಗೆ ಶೆ.100 ಫಲಿತಾಂಶ ದೊರೆತಿದೆ. ಇದಲ್ಲದೇ ಪ್ರಥಮ ವರ್ಷದ ಡಿಎಂಐಟಿ ವಿದ್ಯಾರ್ಥಿನಿಗಳಾಗಿರುವ ಮರಿಯಮ್ಮ ಬೀವಿ ಭೌತಶಾಸ್ತ್ರ100/100, ರಸಾಯನಶಾಸ್ತ್ರ 100/100, ಜೀವಶಾಸ್ತ್ರ 94/100, ಸಫೀನಾ ಭೌತಶಾಸ್ತ್ರ 94/100, ಇಂಗ್ಲಿಷ್ 93/100 ಹಾಗೂ ಫಾತಿಮತ್ ಸಫಾ ಭೌತಶಾಸ್ತ್ರ 99/100, ಡಿಎಮ್‌ಎಲ್‌ಟಿ ವಿಭಾಗದ ಅಫೀಫಾ ಭೌತಶಾಸ್ತ್ರ 93/100, ರಸಾಯನಶಾಸ್ತ್ರ 90/100 ಅಂಕಗಳನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ಸಂಸ್ಥೆಯ ಚೇರ್ಮನ್ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ಧಾಳ, ಉಪನ್ಯಾಸಕರಾದ ಸುಪ್ರಿತಾ. ಬಿ, ಗೌತಮಿ ಶರಣ್ ಪಿಆರ್, ದಿಶಾಂತ್, ಅಬೂಬಕ್ಕರ್ ನಿಟ್ಟೆ ಇವರು ಅತ್ಯುತ್ತಮ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದರು.