ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ ಕಡಬದ ಮತ್ತೋರ್ವ ಯುವತಿ ➤ 85ನೇ ರ‍್ಯಾಂಕ್ ಪಡೆದ ಕಡಬದ ವರ್ಷಿತಾ ಪಿ.ಕೆ.



(ನ್ಯೂಸ್ ಕಡಬ) newskadaba.com ಕಡಬ, ಜ.22. ರಾಜ್ಯ ಪೊಲೀಸ್ ಇಲಾಖೆಯ ಪಿಎಸ್ಐ ಪರೀಕ್ಷೆಯಲ್ಲಿ ರೆಂಜಿಲಾಡಿ ಗ್ರಾಮದ ಪಟ್ಟೆ ನಿವಾಸಿ ಕುಮಾರ್ ಜನಾರ್ದನ ಅವರ ಪುತ್ರಿ ವರ್ಷಿತಾ ಪಿ.ಕೆ. ಅವರು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ರಾಜ್ಯದಲ್ಲಿ 85ನೇ ರ್ಯಾಂಕ್ ಪಡೆದು ಪಿ.ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ.





ವರ್ಷಿತಾ ಪಿ.ಕೆ. ಅವರು ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ, ಎಸ್.ಡಿ.ಎಂ.ಉಜಿರೆ ಹಾಗೂ ಮಂಗಳೂರು ಫಿಷರೀಸ್ ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪಟ್ಟೆ ಕುಮಾರ್ ಜನಾರ್ದನ ಹಾಗೂ ಬಿಳಿನೆಲೆ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರಿ ಅವರ ಪುತ್ರಿ.






 

 

error: Content is protected !!
Scroll to Top