ಉಪ್ಪಿನಂಗಡಿ: ಬಾಲಕನ ಮೇಲೆ ಬೀದಿನಾಯಿಗಳ ದಾಳಿ ➤ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 21. ಇಲ್ಲಿನ ಪರಿಸರದಲ್ಲಿ ಬೀದಿನಾಯಿಗಳ ಅಟ್ಟಹಾಸ ಮಿತಿಮೀರಿದ್ದು, ಬಾಲಕನೋರ್ವನ ಮೇಲೆ ನಾಯಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಇಲ್ಲಿನ ಕೆಂಪುಮಜಲ್ ಎಂಬಲ್ಲಿ ನಡೆದಿದೆ.


ಕೆಂಪಿಮಜಲ್ ಎಂಬಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಬಾಲಕರ ಮೇಲೆ ಎರಗಿದ ನಾಯಿಗಳು ದಾಳಿ ನಡೆಸಿವೆ. ಈ ಸಂದರ್ಭ ಓರ್ವ ತಪ್ಪಿಸಿಕೊಂಡು ಓಡಿಹೋಗಿದ್ದು, ಇನ್ನೋರ್ವ ಬಾಲಕನಿಗೆ ಪರಚಿದ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ಇಲ್ಲಿ ಬೀದಿನಾಯಿಗಳ ಉಪಟಳ ಮಿತಿಮೀರಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿ ಆಕ್ರಮಣ ತೋರಿಸುತ್ತಿವೆ. ಇತ್ತೀಚೆಗೆ ದ್ವಿಚಕ್ರ ಸವಾರರೋರ್ವರನ್ನು ಬೀದಿನಾಯಿಗಳು ಅಟ್ಟಿಸಿದ ಪರಿಣಾಮ ಸವಾರ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ. ನಾಯಿಗಳ ಕಾಟ ನಿಲ್ಲಿಸುವಲ್ಲಿ ಶೀಘ್ರವೇ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

Also Read  ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಕಲಶಾಭಿಷೇಕ

 

 

error: Content is protected !!