ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅಡ್ಡಿಪಡಿಸಿದ ಪ್ರಕರಣ ➤ ಕಾರು ಚಾಲಕನ ಬಂಧನ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 21. ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ಅಡ್ಡಲಾಗಿ ಸುಮಾರು 30 ಕಿಲೋ ಮೀಟರ್ ತನಕ ಸೈಡ್ ಕೊಡದೇ ಸತಾಯಿಸಿದ ಘಟನೆಗೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಕಾರು ಚಾಲಕನನ್ನು ಬಂಧಿಸಿದ್ದಾರೆ‌.

ಬಂಧಿತನನ್ನು ಅತ್ತಾವರದ ಮೋನಿಷ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಭಟ್ಕಳಕ್ಕೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಸೈಡ್ ಬಿಡದೇ ಸತಾಯಿಸಿದ್ದಲ್ಲದೇ ಪಾರ್ಕಿಂಗ್ ಲೈಟ್ ಹಾಕಿ ಮುಂದಿನಿಂದ ವೇಗವಾಗಿ ಸಂಚರಿಸುತ್ತಾ ಪದೇ ಪದೇ ಅಡ್ಡಿಪಡಿಸುತ್ತಿದ್ದನು. ಅದೇ ಕಾರಿನಲ್ಲಿದ್ದ ಇಬ್ಬರು ಯುವಕರು ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಕಾರು ಚಾಲಕನ ಈ ರೀತಿಯ ಉದ್ಧಟತನದ ವಿರುದ್ಧ ಕ್ರಮಕ್ಕೆ ಆಂಬುಲೆನ್ಸ್ ಚಾಲಕರು ಒತ್ತಾಯಿಸಿದ್ದರು. ಘಟನೆಯ ಕುರಿತು ತನಿಖೆ ನಡೆಸಿ ಮಾಹಿತಿ ಕಲೆಹಾಕಿದ ಚಾಲಕನ ವಿರುದ್ಧ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಲ್ಲದೇ, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

Also Read  ಬಿಳಿನೆಲೆಯಲ್ಲಿ ಉಚಿತ ಎಲ್‍ಪಿಜಿ ಗ್ಯಾಸ್ ವಿತರಣೆ

 

error: Content is protected !!
Scroll to Top