ಕೊಂಬಾರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ➤ ರಬ್ಬರ್ ಕಾರ್ಮಿಕರಿಂದ ಕೆ.ಎಫ್.ಡಿ.ಸಿ ಲಾರಿ ತಡೆಹಿಡಿದು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜ. 20. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ಅಭಿವೃದ್ದಿ ನಿಗಮದ ಮೂಜೂರು ಘಟಕದ ಕೊಂಬಾರು ಮಂಡೇಕರ ಬ್ಲಾಕ್ ನಲ್ಲಿ ಕೆ.ಎಫ್.ಡಿ.ಸಿ ರಬ್ಬರ್ ಹಾಲು ಸಾಗಾಟದ ಲಾರಿಯನ್ನು ತಡೆಹಿಡಿದು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ವೇತನ ಪರಿಷ್ಕರಣೆ, ಮೂರ್ತೆ ಮಾಡಲು ರಬ್ಬರ್ ಮರಗಳನ್ನು ಕಡಿತಗೊಳಿಸುವುದು, ಬೇಡಿಕೆ ಈಡೇರಿಕೆಗೆ ಹಾಗೂ ಮಾತುಕತೆಗೆ ದಿನಾಂಕ ನಿಗದಿ ಮಾಡುವುದು ಹಾಗೂ ಸುಮಾರು ವರ್ಷಗಳಿಂದ ದುಡಿಯುತ್ತಿರುವ ರಬ್ಬರ್ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕರು ಲಾರಿಯನ್ನು ತಡೆಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಅಧಿಕಾರಿಗಳು ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಮಿಕರು ತಿಳಿಸಿದ್ದಾರೆ. ರಾಜಕೃಷ್ಣ, ಗಣೇಶ್ ಮಲ್ಲಿಕಟ್ಟೆ, ಶಿವ, ಮಹೇಂದ್ರ, ನಾಗರಾಜ್, ಭಾಗೀನಾಥ್ ಹಾಗೂ ವಿಜಯ್ ಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Also Read  ಕೊರೋನಾ ಎರಡನೇ ಅಲೆ ಹಿನ್ನೆಲೆ ➤ ಮುಂಜಾಗ್ರತಾ ಕ್ರಮ ಪಾಲಿಸದವರ ವಿರುದ್ಧ ಕಾನೂನು ಕ್ರಮ- ಕಡಬ ತಹಶೀಲ್ದಾರ್ ಅನಂತ್ ಶಂಕರ್

 

error: Content is protected !!
Scroll to Top