(ನ್ಯೂಸ್ ಕಡಬ) newskadaba.com ನವದೆಹಲಿ, ಜ. 20. ಇನ್ನು ಮುಂದೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಕೇಂದ್ರ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಸೀರಂ ಇನ್ಸ್ಟಿಟ್ಯೂಟ್ ಹಾಗೂ ಭಾರತರ ಬಯೋಟೆಕ್ ಸಂಸ್ಥೆ ತಮ್ಮ ಲಸಿಕೆಗಳನ್ನು ಮಾರುಕಟ್ಟೆಗೆ ಒದಗಿಸಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ ಸಿಡಿಎಸ್ ಸಿಒ ಎರಡೂ ಕಂಪನಿಯ ಲಸಿಕೆಗಳನ್ನು ಪರಿಶೀಲನೆ ನಡೆಸಿ ಡಿಸಿಜಿಐಗೆ ಶಿಫಾರಸು ಮಾಡಿದೆ. ಲಸಿಕೆಯ ಕುರಿತು ಡಿಸಿಜಿಐ ಮೌಲ್ಯಮಾಪನ ನಡೆಸಿ ಬಳಿಕವೇ ನಿರ್ಧರಿಸಲಿದೆ. ಲಸಿಕೆ ಮಾರುಕಟ್ಟೆಗೆ ಲಗ್ಗೆಯಿಟ್ಟರೂ ಜನಸಾಮಾನ್ಯರ ಕೈಗೆ ಸಿಗಲು ಸಮಯಾವಕಾಶ ಬೇಕಾಗುತ್ತದೆ ಎಂದು ವರದಿ ತಿಳಿಸಿದೆ.