ಪ್ರಚಾರಕ್ಕೆ ತೆರಳಿದ ಬಿಜೆಪಿ ಶಾಸಕನನ್ನು ಹಿಂದಕ್ಕೆ ಓಡಿಸಿದ ಗ್ರಾಮಸ್ಥರು..! ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಲಕ್ನೋ, ಜ. 20. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಹಿನ್ನೆಲೆ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕರೋರ್ವರನ್ನು ಗ್ರಾಮಸ್ಥರು ವಾಪಾಸ್ ಕಳುಹಿಸಿದ ಘಟನೆ ಮುಜಫ್ಪರ್ ನಗರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಎಲ್ಲೆಟೆ ವೈರಲ್ ಆಗಿದೆ.

ಖತೌಲಿ ಎಂಬಲ್ಲಿನ ಶಾಸಕ ವಿಕ್ರಂ ಸಿಂಗ್ ಸೈನಿ ಅವರು ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಗ್ರಾಮವೊಂದಕ್ಕೆ ಬಂದಿದ್ದು, ಈ ವೇಳೆ ಗ್ರಾಮಸ್ಥರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಹೆದರಿದ ಸಿಂಗ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗ್ರಾಮಸ್ಥರ ಗುಂಪೊಂದು ಶಾಸಕರ ಕಾರನ್ನು ಹಿಂಬಾಲಿಸಿ, ಕಾರಿನಿಂದ ಕೆಳಗಿಳಿಯುವಂತೆ ಕೂಗಾಡುತ್ತಿರುವುದು ಹಾಗೂ ಶಾಸಕರ ವಿರುದ್ದ ಘೋಷಣೆ ಕೂಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Also Read  ಬಾಲ್ಯ ವಿವಾಹಕ್ಕೆ ಅಧಿಕಾರಿಗಳಿಂದ ತಡೆ

 

 

 

error: Content is protected !!
Scroll to Top