ಮಂಗಳೂರು- ಬೆಂಗಳೂರು ರಾ.ಹೆ ಕಾಮಗಾರಿ ಹಿನ್ನೆಲೆ ➤ ಶಿರಾಡಿ ಘಾಟ್ ಬಂದ್ ಗೆ ಜಿಲ್ಲಾಡಳಿತ ಪ್ರಸ್ತಾಪ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. 10 ಕಿ.ಮೀ ರಸ್ತೆಯ ಚತುಷಪಥ ಕಾಮಗಾರಿ ನಡೆಯುವ ಹಿನ್ನೆಲೆ ಬಂದರು ನಗರಿ ಮಂಗಳೂರು ಹಾಗು ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾ.ಹೆ 75ನ್ನು ಆರು ತಿಂಗಳುಗಳ ಕಾಲ ಮತ್ತೆ ಬಂದ್ ಮಾಡಲು ಕಾಮಗಾರಿಯ ಟೆಂಡರ್ ಪಡೆದಿರುವ ರಾಜ್ ಕಮಲ್ ಕಂಪನಿಯು ಹಾಸನ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ.


ಹೆದ್ದಾರಿ ಬಂದ್ ವಿಚಾರ ತಿಳಿಯುತ್ತಿದ್ದಂತೆಯೇ ಹಾಸನ ಮತ್ತು ದ.ಕ. ಜಿಲ್ಲೆಯ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಹೆದ್ದಾರಿ ಬಂದ್ ಮಾಡಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಕೆಲ ವರ್ಷಗಳಿಂದ ಹಾಸನ- ಸಕಲೇಶಪುರ ರಸ್ತೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಟೆಂಡರ್ ಕಂಪನಿ ಭರವಸೆ ನೀಡಿದ್ದು, ಇದರಿಂದಾಗಿ ಮಂಗಳೂರು- ಬೆಂಗಳೂರು ರಾ.ಹೆ. 75ರ ಶಿರಾಡಿ ಘಾಟ್ ಬಂದ್ ಸಾಧ್ಯತೆಗಳು ಹೆಚ್ಚಾಗಿವೆ.

Also Read  ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾಜಶೇಖರ್ ನಿಧನ

 

 

error: Content is protected !!
Scroll to Top