ಉಪ್ಪಿನಂಗಡಿ: ಒಣಗಲು ಹಾಕಿದ್ದ ಅಡಿಕೆ ಕಳ್ಳತನ ➤ ಅಡಿಕೆ ಸಹಿತ ಇಬ್ಬರು ಖಾಕಿ ಬಲೆಗೆ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 20. ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬಂಧಿತರನ್ನು ಪುತ್ತೂರು ಚಿಕ್ಕಮುಡ್ನೂರು ಬಡವು ನಿವಾಸಿ ವಿನಯ್ ಕುಮಾರ್ ಹಾಗೂ ಕೆಮ್ಮಾಯಿ ನಿವಾಸಿ ಮಹಮ್ಮದ್ ಜುನೈದ್ ಎಂದು ಗುರುತಿಸಲಾಗಿದೆ. ಇವರು ಬಂಟ್ವಾಳ ತಾಲೂಕಿನ ನಿವಾಸಿ ವಸಂತ ದೇವಾಡಿಗ ಎಂಬವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕದ್ದೊಯ್ದಿದ್ದು, ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸರು ಉಪ್ಪಿನಂಗಡಿ ನೆಕ್ಕಿಲಾಡಿ ಬಳಿ ರಿಕ್ಷಾದಲ್ಲಿದ್ದ ಇಬ್ಬರನ್ನು ಬಂಧಿಸಿ, ಅಡಿಕೆ ಹಾಗೂ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

Also Read  ಚುನಾವಣೆಯಲ್ಲಿ ಗೆಲ್ಲಲು ನಾನು ವಾಮಾಚಾರ ಮಾಡಿಸಿ ಕೈ ಸುಟ್ಟುಕೊಂಡಿದ್ದೆ ► ಸತ್ಯ ಬಿಚ್ಚಿಟ್ಟ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

 

 

error: Content is protected !!
Scroll to Top