ಪಟ್ಟಣ ಪಂಚಾಯತ್ ಸಿಬ್ಬಂದಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ- ರಕ್ಷಣೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಜ. 20. ಇಲ್ಲಿನ ಪಟ್ಟಣ ಪಂಚಾಯತ್ ಸಿಬ್ಬಂದಿಯೋರ್ವರು ಡೆತ್ ನೋಟ್ ಬರೆದಿಟ್ಟು ನೇತ್ರಾವತಿ ಸೇತುವೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಆತನನ್ನು ತಡೆದು ರಕ್ಷಿಸಿದ ಘಟನೆ ನಡೆದಿದೆ.


ಆತ್ಮಹತ್ಯೆಗೆ ಯತ್ನಿಸಿದಾತನನ್ನು ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿರುವ ರಾಜೇಶ್ ಎಂದು ಗುರುತಿಸಲಾಗಿದೆ. ವಿಟ್ಲ ಮಂಗಳಪದವು ಎಂಬಲ್ಲಿನ ವ್ಯಕ್ತಯೋರ್ವರ ಮನೆ ಮಂಜೂರಾತಿ ವಿಚಾರದಲ್ಲಿ ಪ.ಪಂ ಸದಸ್ಯರೋರ್ವರು ರಾಜೇಶ್ ಅವರ ಹೆಸರಿನಲ್ಲಿ ಲಂಚ ಕೇಳಿರುವುದಾಗಿ ಆರೋಪ ವ್ಯಕ್ತವಾಗಿತ್ತು. ಇದರಿಂದ ನೊಂದ ರಾಜೇಶ್ ವಾಟ್ಸಾಪ್ ಮೂಲಕ ಕೆಲವರಿಗೆ ಸಂದೇಶ ಕಳುಹಿಸಿದ್ದು, ನನ್ನ ಬಗ್ಗೆ ಸುಳ್ಳಾರೋಪ ಮಾಡಿದ್ದರಿಂದ ನಾನು ಮಾನಸಿಕವಾಗಿ ಮನನೊಂದಿದ್ದೇನೆ. ಆದ್ದರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ. ಅಲ್ಲದೇ ಡೆತ್ ನೋಟ್ ನಲ್ಲಿಯೂ ಅದೇ ವಿಚಾರ ಬರೆದಿಟ್ಟಿದ್ದಾರೆ. ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕರ ಬಂದಿದ್ದು, ತಕ್ಷಣವೇ ಹುಡುಕಾಟ ಆರಂಭಿಸಿದಾ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿದ್ದಾನೆ.

Also Read  ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!!

 

 

error: Content is protected !!
Scroll to Top