ನೆಲ್ಯಾಡಿ ಪಿಗ್ಮಿ ಸಂಗ್ರಾಹಕ ನಾಪತ್ತೆ ➤ ಹಲವರಿಂದ ಸಾಲ ಪಡೆದು ಹಿಂತಿರುಗಿಸಲಾಗದೇ ವಂಚನೆ- ಆರೋಪ..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ. 19. ಇಲ್ಲಿನ ಸಹಕಾರ ಸಂಘವೊಂದರಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್ ಅವರು ಕಳೆದ ಹದಿನೈದು ದಿನಗಳಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.


ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪಿಗ್ಮಿ ಸಂಗ್ರಾಹಕರಾಗಿದ್ದ ಇವರು ಚಿರಪರಿಚಿತರಾಗಿದ್ದು, ನೆಲ್ಯಾಡಿಯ ಹಲವಾರು ಜನರಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ ಇವರು, ಸಾಲ ತೀರಿಸಲಾಗದೇ ನಾಪತ್ತೆಯಾಗಿರುವುದಾಗಿ ತಿಲಕಿದುಬಂದಿದೆ. ಇದರ ನಡುವೆ ಜ. 18ರಂದು ಓರ್ವ ಪತ್ರಕರ್ತರಿಗೆ ವಾಟ್ಸಾಪ್ ಮೂಲಕ ಕರೆಮಾಡಿದ ಇವರು, ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್ ನ ಜಾಲದೊಳಗೆ ಸಿಲುಕಿರುವುದಾಗಿ ತಿಳಿಸಿದ್ದಾರೆ. ಇಲ್ಲಿನ ಅಡಿಕೆ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಂದಲೂ ಲಕ್ಷಕ್ಕೂ ಮಿಕ್ಕಿ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೇ ನಾಪತ್ತೆಯಾಗಿದ್ದಾರೆ ಎಂದೂ ಹೇಳಲಾಗಿದೆ. ಅಲ್ಲದೇ ಚಿಟ್ ಫಂಡ್ ನಲ್ಲೂ ಕೆಲವರಿಗೆ ಮೋಸ ಆದ ದೂರುಗಳು ಕೇಳಿಬಂದಿದೆ. ಪ್ರವೀಣ್ ಕುಮಾರ್ ಜ. 03ರಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕುರಿತು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ಬೆಳ್ಳಾರೆ ಘಟಕದ ಗೃಹರಕ್ಷಕದಳ ಕಛೇರಿಗೆ ಜಿಲ್ಲಾ ಸಮಾದೇಷ್ಠರ ಭೇಟಿ

 

error: Content is protected !!
Scroll to Top