ಐತ್ತೂರು ಗ್ರಾಮದ ಜನತೆಯ ಬಹುಕಾಲದ “ಆಜನ” ಸೇತುವೆಗೆ ಕೊನೆಗೂ ಮುಕ್ತಿ ➤ ಸಚಿವ ಅಂಗಾರರಿಂದ ಗುದ್ದಲಿ ಪೂಜೆ..!

(ನ್ಯೂಸ್ ಕಡಬ) newskadaba.com ಮರ್ಧಾಳ, ಜ. 19. ಐತ್ತೂರು ಗ್ರಾಮದ ಜನರ ಬಹುಕಾಲದ ಬೇಡಿಕೆಯಾದ “ಆಜನ” ಸೇತುವೆ ನಿರ್ಮಾಣಕ್ಕೆ ಸಚಿವ ಎಸ್.ಅಂಗಾರರವರು ಗುದ್ದಲಿ ಪೂಜೆ ನೆರವೆರಿಸಿದರು.

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತುವೆ ಯೋಜನೆಯಲ್ಲಿ 30 ಲಕ್ಷ ರೂ. ಅನುದಾನದಲ್ಲಿ ಸೇತುವೆ ನಿರ್ಮಾಣ ವಾಗಲಿದೆ. ಮಳೆಗಾಲದಲ್ಲಿ ಈ ಭಾಗದ ಜನರು ಅನುಭವಿಸುತ್ತಿದ್ದ ತೊಂದರೆಗೆ ಇನ್ನು ಮುಕ್ತಿ ದೊರಕಲಿದ್ದು, ಕಳೆದ ಕೆಲವು ದಶಕಗಳಿಂದ ಆ ಭಾಗದ ಜನರು ಗ್ರಾಮಸಭೆ, ಶಾಸಕರು ಹಾಗೂ ಸಂಬಂಧಪಟ್ಟವರಲ್ಲಿ ಮನವಿ ಮಾಡುತ್ತಲೇ ಬಂದಿದ್ದರು. ಕೊನೆಗೂ ಅದು ನೆರವೇರುವ ಅವಕಾಶ ಬಂದೊದಗಿದೆ. ಈ ಸಂದರ್ಭ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ಸತೀಶ್ ಪೂಜಾರಿ ಕೊಡೆಂಕಿರಿ, ನಾರಾಯಣ ಶೆಟ್ಟಿ ಅತ್ಯಡ್ಕ, ಮೇದಪ್ಪ ಗೌಡ, ತಮ್ಮಯ್ಯ ಗೌಡ, ಐತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

Also Read  ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ

 

 

error: Content is protected !!
Scroll to Top