ಆಲಂಕಾರು: ದೋಣಿ ಮಾಲಕ ನೇಮಣ್ಣ ಗೌಡ ಮೃತ್ಯು..!

(ನ್ಯೂಸ್ ಕಡಬ) newskadaba.com ಆಲಂಕಾರು, ಜ. 19. ಸುಮಾರು 47 ವರ್ಷಗಳಿಂದ ಕುಮಾರಧಾರ ನದಿಯ ದೋಣಿ ಮಾಲಿಕ ಹಾಗೂ ನಾವಿಕನಾಗಿ ದುಡಿಯುತ್ತಿದ್ದ ಆಲಂಕಾರು ಗ್ರಾಮದ ಕಕ್ವೆ ನೇಮಣ್ಣ ಗೌಡ (73) ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಸ್ವ-ಗೃಹದಲ್ಲಿ ನಿಧನರಾದರು.

ಮೃತರು ಶಾಂತಿಮೊಗರು ಕುಮಾರಧಾರ ನದಿಯಲ್ಲಿ ದೋಣಿಯಲ್ಲಿ ಜನರನ್ನು ಸಾಗಿಸುವುದರ ಮೂಲಕ ನಾವಿಕರಾಗಿ ಜನಪ್ರಿಯತೆ ಗಳಿಸಿದ್ದರು. ಇವರ ಸುದೀರ್ಘ ಸೇವೆಯನ್ನು ಗುರುತಿಸಿ ಆಲಂಕಾರು ಗ್ರಾಮ ಪಂಚಾಯತ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಸನ್ಮಾನಿಸಿ ಗುರುತಿಸಿದ್ದವು. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Also Read  ಕಡಬ: ಫೆ. 22ರಿಂದ ಫೆ. 24ರ ವರೆಗೆ ಪರಪ್ಪು ಧರ್ಮ ನೇಮೋತ್ಸವ

 

 

 

error: Content is protected !!
Scroll to Top