ಮಂಗಳೂರು: ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ನಡುವೆ ಹೊಯ್ ಕೈ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರಸ್ ಕಛೇರಿಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ರಮಾನಾಥ್ ರೈ ಬಣದ ನಡುವೆ ಹೊಯ್ ಕೈ ಆದ ಘಟನೆ ವರದಿಯಾಗಿದೆ.

ಕೇಂದ್ರ ಸರಕಾರ ನಾರಾಯಣ ಗುರು ಅವರ ಸ್ಥಬ್ದ ಚಿತ್ರಕ್ಕೆ ಅವಕಾಶ ವಿರೋಧಿಸಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡ “ನಾರಾಯಣ ಗುರು ಕಡೆಗೆ ನಮ್ಮ ನಡಿಗೆ” ಪಾದ ಯಾತ್ರೆಗೆ ಸಿದ್ದತೆ ನಡೆಸಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷದೊಳಗೆಯೇ ವಿವಾದ ಸೃಷ್ಟಿಯಾಗಿದ್ದು, ಪಾದಯಾತ್ರೆಗೂ ಮುನ್ನ ಕಾಂಗ್ರೆಸ್ ಕಛೇರಿಯಲ್ಲಿ ನಾಯಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈ ಹಂತಕ್ಕೆ ತಲುಪಿದೆ. ಇಂದು ಬೆಳಗ್ಗೆ ನಾರಾಯಣ ಗುರು ವಿಚಾರವಾಗಿ ಪಾದಯಾತ್ರೆ ಮಾಡುವುದಾಗಿ ನಿರ್ಧರಿಸಿದ್ದು, ಆದರೆ ಇದಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಪಡೆಯದೇ ಇರುವುದು ಕೆಲವರನ್ನು ಅಸಮಾಧಾನಕ್ಕೆ ಒಳಪಡಿಸಿದೆ ಎಂದೆನ್ನಲಾಗಿದೆ.

Also Read  ಕಡಬ: ಭವಿಷ್ಯ ನುಡಿಯುವ ನೆಪದಲ್ಲಿ ಮಗುವನ್ನು ಅಪಹರಿಸಿದ ವದಂತಿ ➤ ವಿಚಾರಣೆ ನಡೆಸಿದಾಗ ಬೆಚ್ಚಿಬಿದ್ದ ಸಾರ್ವಜನಿಕರು ➤ ಕೆಲಕಾಲ ಆತಂಕ ಸೃಷ್ಟಿ

error: Content is protected !!
Scroll to Top