ತಲಪಾಡಿ: ಸೊಸೈಟಿಯೊಳಗಡೆ ಅನುಮಾನಾಸ್ಪದವಾಗಿ ಮೂವರು ಮೃತ್ಯು ► ಸಿಡಿಲು ಬಡಿದಿರಬಹುದೆಂಬ ಶಂಕೆ

(ನ್ಯೂಸ್ ಕಡಬ) newskadaba.com ತಲಪಾಡಿ, ನ.07. ಇಲ್ಲಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ.

ಮೃತರನ್ನು ಉಮೇಶ್, ಸಂತೋಷ್ ಮತ್ತು ಸೋಮನಾಥ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಕೋಟೆಕಾರು ಶಾಖೆಯ ಕಾವಲು ಸಿಬ್ಬಂದಿಗಳೆನ್ನಲಾಗಿದೆ. ಇವರು ಹೇಗೆ ಶಾಖೆಯ ಒಳಭಾಗದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಸಂಶಯ ಮೂಡಿದೆ. ಜೂನ್‌ 23 ರಂದು ಈ‌ ಶಾಖೆಯಲ್ಲಿ ಚಿನ್ನಾಭರಣ ದರೋಡೆಗೆ ವಿಫಲ ಯತ್ನ ನಡೆದಿತ್ತು. ಆ ನಿಟ್ಟಿನಲ್ಲಿ ಯಾರಾದರೂ ಕೊಲೆ‌ ಮಾಡಿರಬಹುದಾ ಅಥವಾ ಸಿಡಿಲಿನ ಆಘಾತ ಉಂಟಾಗಿದೆಯೇ ಎನ್ನುವ ಬಗ್ಗೆ ಉನ್ನತ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಭಾನುವಾರ ಹಾಗೂ ಸೋಮವಾರ ಶಾಖೆಗೆ ರಜೆ ಇದ್ದ ಕಾರಣ ಮೃತಪಟ್ಟ ಘಟನೆ ಮಂಗಳವಾರದಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಬೆಳಕಿಗೆ ಬಂದಿದೆ.

Also Read  ಕ್ಷಯರೋಗಿಗಳ ಮಾಹಿತಿ ಕಲೆ ಹಾಕಿ -ಅಪರ ಜಿಲ್ಲಾಧಿಕಾರಿ

error: Content is protected !!
Scroll to Top