ರೋಗನಿರೋಧಕ ಶಕ್ತಿಯ ವರ್ಧನೆಗೆ ಸೂರ್ಯ ನಮಸ್ಕಾರ ಉಪಯುಕ್ತ ➤ ಡಾ.ವನಿತಾ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ಆಯುರ್ ಮಂತ್ರಾಲಯ ಮತ್ತು ಪುಣೆಯ ನಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿಯ ಸಹಯೋಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ವಿಭಾಗದ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಅಂಗ ಸಂಸ್ಥೆಗಳಲ್ಲಿ ಸೂರ್ಯ ನಮಸ್ಕಾರವನ್ನು ಮಕರ ಸಂಕ್ರಾಂತಿಯ ದಿನದಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ, ಸಕಲ ಜೀವ ಜಗತ್ತಿಗೆ ಶಕ್ತಿಯ ಆಕರವಾದ ಸೂರ್ಯನಿಗೆ ವಿಶೇಷ ಆಸನಗಳ ಸಂಯೋಜನೆಯ ಮೂಲಕ ನಮಸ್ಕರಿಸುವ ವಿಧಾನವೇ ಸೂರ್ಯ ನಮಸ್ಕಾರ. ಅನುದಿನ ಅಭ್ಯಾಸದ ಮೂಲಕ ಸ್ವಾಸ್ಥ್ಯ ಸಂರಕ್ಷಣೆ ಸಾಧ್ಯ ಎನ್ನುವುದು ಈಗಾಗಲೇ ಸಾಬೀತಾಗಿದ್ದು, ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯ ವರ್ಧನೆಗಾಗಿ ಸೂರ್ಯ ನಮಸ್ಕಾರದ ಅಭ್ಯಾಸವನ್ನು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯ ಎಂದರು. ವಿವಿಧ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸುಮಾರು 800 ಕ್ಕೂ ಅಧಿಕ ಜನರು ಯೋಗದಲ್ಲಿ ಭಾಗಿಯಾದರು. ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಭಾಗದ ವಿದ್ಯಾರ್ಥಿಗಳು ಆನ್ ಲೈನ್ ವೇದಿಕೆಯ ಮೂಲಕವೂ ಸುಮಾರು 200 ಜನರಿಗೆ ಸೂರ್ಯ ನಮಸ್ಕಾರದ ತರಬೇತಿ ನೀಡಿದರು. ಯೋಗ ವಿಭಾಗದ ಡೀನ್ ಡಾ. ವೃಂದಾ ಬೇಡೆಕರ್ ಮಕರ ಸಂಕ್ರಾಂತಿಯ ದಿನದಂದು ಸೂರ್ಯನಮಸ್ಕಾರದ ಅಭ್ಯಾಸದ ಔಚಿತ್ಯವನ್ನು ವಿವರಿಸಿದರು. ಯೋಗ ವಿಭಾಗದ ಉಪನ್ಯಾಸಕಿ ಸಹನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅರ್ಚನಾ, ಡಾ. ನಿತೇಶ್ ಉಪಸ್ಥಿತರಿದ್ದರು.

Also Read  ಡಿಜಿಟಲ್ ಪರಿಹಾರ ವಿನ್ಯಾಸಕ್ಕೆ ಅರ್ಜಿ ಆಹ್ವಾನ

 

 

error: Content is protected !!
Scroll to Top