ಆಟೋರಿಕ್ಷಾದಲ್ಲಿ ಅಕ್ರಮ‌ ದನದ ಮಾಂಸ ಸಾಗಾಟ ➤ ಆರೋಪಿಯ ಸಹಿತ ರಿಕ್ಷಾ, ಮಾಂಸ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 17. ವಿಕೇಂಡ್ ಕರ್ಪ್ಯೂ ಸಂದರ್ಭದಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡಲೆತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿ ಸಹಿತ ಮಾಂಸವನ್ನು ವಶಕ್ಕೆ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಪಟ್ಲ ನಿವಾಸಿ ಅಬ್ದುಲ್‌ ಖಾದರ್‌ (30) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 60 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ವೀಕೆಂಡ್ ಕರ್ಪೂ ಜ್ಯಾರಿಯಲ್ಲಿದ್ದ ಹಿನ್ನೆಲೆ ಕರ್ತವ್ಯದಲ್ಲಿದ್ದ ಗ್ರಾಮಾಂತರ ಎಸ್.ಐ ಹರೀಶ್ ಅವರು ನಾವೂರು ಮಸೀದಿಯ ಮುಂದೆ ತೆರಳುತ್ತಿದ್ದ ವೇಳೆ ಸರಪಾಡಿ ಕಡೆಯಿಂದ ಒಂದು ಅಟೋ ರಿಕ್ಷಾ ಮಣಿಹಳ್ಳ ಕಡೆಗೆ ವೇಗವಾಗಿ ಬರುತ್ತಿದ್ದು ಸಂಶಯಗೊಂಡ ಎಸ್.ಐ. ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದಾಗ ಚಾಲಕ ರಿಕ್ಷಾವನ್ನು ಸ್ವಲ್ಪ ದೂರ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ್ದನು. ಆತನನ್ನು ಹಿಡಿದು ವಿಚಾರಿಸಿದಾಗ ಹಿಂದಿನ ಸೀಟಿನ ಕೆಳಗೆ ಪ್ಲಾಸ್ಟಿಕ್ ಚೀಲದಲ್ಲಿ ದನದ ಮಾಂಸ ತುಂಬಿಸಿಡಲಾಗಿದ್ದು, ‌ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಆರೋಪಿಯ ಸಹಿತ ಮಾಂಸ ಹಾಗೂ ಅಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.

Also Read  ಸ್ಪೀಕರ್ ಆಗಿ ಮೊದಲ ಬಾರಿ ಮಂಗಳೂರಿಗೆ ಬಂದ ಯುಟಿ ಖಾದರ್

 

 

error: Content is protected !!
Scroll to Top