ಕಡಬ: ನಂದಿನಿ ಪಾರ್ಲರ್ ಶುಭಾರಂಭ ➤ ಹಾಲು ಮತ್ತು ಹಾಲಿನ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಜ.17. ರಾಜ್ಯ ಸರಕಾರದ ಸಮೃದ್ಧಿ ಯೋಜನೆಯಡಿ ದ.ಕ. ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ನಿರ್ಮಾಣಗೊಂಡ ನಂದಿನಿ ಕ್ಷೀರ ಮಳಿಗೆ (ಪಾರ್ಲರ್) ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ರವಿರಾಜ್ ಉಡುಪ, ಸಹಾಯಕ ವ್ಯವಸ್ಥಾಪಕರಾದ ಸಚಿನ್, ಮಾರುಕಟ್ಟೆ ಅಧೀಕ್ಷಕರಾದ ಸದಾಶಿವ ನಾಯ್ಕ್, ಡೈರಿ ಸೂಪರ್ ವೈಸರ್ ಕಿಶನ್ ರಾಜ್, ಕಡಬ ಹಾಲು ಉತ್ಪಾದಕರ ಸಂಘದ ಜಯಚಂದ್ರ ರೈ ಕುಂಟೋಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲೀಕರಾದ ಯೋಗೀಶ್ ಪಂಜ ಹಾಗೂ ಹರ್ಷಿತ್ ಕುತ್ಯಾಡಿ ಅತಿಥಿಗಳನ್ನು ಬರಮಾಡಿಕೊಂಡರು. ನೂತನ ಮಳಿಗೆಯಲ್ಲಿ ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ, ಐಸ್ ಕ್ರೀಂ ಸೇರಿದಂತೆ ವಿವಿಧ ರೀತಿಯ ಹಾಲಿನ ಉತ್ಪನ್ನಗಳು ದೊರೆಯಲಿವೆ.

Also Read  ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಪ್ರಬಲ ವಿರೋಧ ➤ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಕಡಬದಲ್ಲಿ ಬೃಹತ್ ಪ್ರತಿಭಟನೆ

error: Content is protected !!
Scroll to Top